ಮುಕ್ತಾಯ ಹಂತದಲ್ಲಿರುವ ಬಿಗ್ ಬಾಸ್ ಗೆ ಹೊಸ ಸಂಕಷ್ಟ..! ಕಿಚ್ಚನ ವಿರುದ್ಧ ದೂರು ದಾಖಲು!!

Share with

ಕನ್ನಡದ ಬಿಗ್ ಬಾಸ್ ಸೀಸನ್-12 (Bigg Boss Kannada 12) ಮುಕ್ತಾಯದ ಹಂತಕ್ಕೆ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಗ್ರಾಂಡ್ ಫಿನಾಲೆ ನಡೆಯಲಿದೆ. ಈ ನಡುವೆ ಶೋಗೆ ಹೊಸ ಸಂಕಷ್ಟ ಎದುರಾಗಿದೆ.

ಕಿಚ್ಚ ಸುದೀಪ್ (Kiccha Sudeep) ನಡೆಸಿಕೊಡುವ ‘ಬಿಗ್ ಬಾಸ್’ ಯಶಸ್ವಿಯಾಗಿ ಮುಕ್ತಾಯ ಕಾಣುವ ಹಂತಕ್ಕೆ ಬಂದಿದೆ. ಈ ಸೀಸನ್‌ನಲ್ಲಿ ಒಂದಷ್ಟು ವಿವಾದಕ್ಕೆ ಒಳಗಾಗಿದ್ದ ಶೋ ಈಗ ಮತ್ತೊಂದು ಹೊಸ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ಕಿಚ್ಚ ಸುದೀಪ್ ಅವರು ವೀಕೆಂಡ್‌ ಎಪಿಸೋಡ್‌ನಲ್ಲಿ ಆಡಿದ ಮಾತೊಂದು ಸಂಕಷ್ಟ ತಂದಿಟ್ಟಿದೆ.

ಆಗಿದ್ದೇನು?:

ಕಿಚ್ಚ ಸುದೀಪ್ ಪ್ರತಿ ವಾರ ವೀಕೆಂಡ್ ಎಪಿಸೋಡ್ ನಡೆಸಿಕೊಡುತ್ತಾರೆ. ಈ ವೇಳೆ ಅವರು ಆ ವಾರ ಮನೆಯಲ್ಲಿ ನಡೆದ ಸನ್ನಿವೇಶಗಳ ಬಗ್ಗೆ ಮಾತನಾಡುತ್ತಾರೆ. ಅವರು ಮಾತನಾಡುವಾಗ ಕೆಲವೊಂದು ಉದಾಹರಣೆಗಳನ್ನು ನೀಡುತ್ತಾರೆ. ಕಿಚ್ಚನ ಮಾತಿನಲ್ಲಿ ಒಂದು ತೂಕವಿರುತ್ತದೆ. ಅವರು ಮಾತಿನಲ್ಲೇ ಸ್ಪರ್ಧಿಗಳ ನಡವಳಿಕೆಯನ್ನು ತಿದ್ದುತ್ತಾರೆ.

ಆದರೆ ಇದೇ ವಿಚಾರವಾಗಿ ಹೊಸ ಸಂಕಷ್ಟ ಎದುರಾಗಿದೆ. ಇತ್ತೀಚೆಗೆ ಸುದೀಪ್ ಅವರು ವೀಕೆಂಡ್ ಎಪಿಸೋಡ್‌ನಲ್ಲಿ “ರಣಹದ್ದುಗಳು ಹೊಂಚು ಹಾಕಿ ಕರೆಕ್ಟ್ ಟೈಮ್ ಗೆ ಹಿಡಿಯುತ್ತವೆ” ಎಂದು ಹೇಳಿದ್ದರು.

ರಣಹದ್ದುಗಳ ಬಗ್ಗೆ ನಟ ಸುದೀಪ್ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲು ಮಾಡಲಾಗಿದೆ. ಸುದೀಪ್ ವಿರುದ್ಧ ಪಕ್ಷಿಪ್ರೇಮಿಗಳು ಹಾಗೂ ರಹಣದ್ದು ಸಂರಕ್ಷಣಾ ಟ್ರಸ್ಟ್‌ನಿಂದ ಬೆಂಗಳೂರು ದಕ್ಷಿಣ ಡಿಎಫ್ ಒ ರಾಮಕೃಷ್ಣಪಗೆ ದೂರು ದಾಖಲು ನೀಡಲಾಗಿದೆ.

ಹದ್ದುಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಮುಂದಿನ ಸಂಚಿಕೆಯಲ್ಲಿ ವೀಕ್ಷಕರಿಗೆ ತಿಳಿಸಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.

ಸದ್ಯ ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು ಮಾಡಲಾಗಿದೆ.


Share with

Leave a Reply

Your email address will not be published. Required fields are marked *