ಉಳ್ಳಾಲ: ಬೈಕ್ ನೇತ್ರಾವತಿ ಸೇತುವೆ ಡಿವೈಡರ್ ಗೆ ಗುದ್ದಿ ಬೈಕ್ ಸವಾರ ಸ್ಥಳದಲ್ಲೇ ಸಾವು..!

Share with

ಉಳ್ಳಾಲ: ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದು ಸವಾರ ಸಾವನ್ನಪ್ಪಿರುವ ಘಟನೆ ರಾ.ಹೆ. 66ರ ನೇತ್ರಾವತಿ ಸೇತುವೆಯಲ್ಲಿ ಜ.23ರ ತಡರಾತ್ರಿ ವೇಳೆ ಸಂಭವಿಸಿದೆ.

ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದು ಸವಾರ ಸಾವು

ಬಾಗಲಕೋಟೆ ನಿವಾಸಿ ಸುರೇಶ್ (30) ಮೃತಪಟ್ಟವರು. ಕಲ್ಲಾಪು ಸಲಫಿ ಮಸೀದಿಯ ಹತ್ತಿರ ಕುಟುಂಬ ಸಮೇತರಾಗಿ ಹಲವು ವರ್ಷಗಳಿಂದ ಬಾಡಿಗೆಯಲ್ಲಿದ್ದರು. ಮಂಗಳೂರಿನ ಬುಲೆಟ್ ಶೋರೂಮ್ ನಲ್ಲಿ ಕೆಲಸಕ್ಕಿದ್ದ ಸುರೇಶ್ ಅವರು ಬಳಿಕ ಪಂಪ್ವೆಲ್ ಸಮೀಪ ಗ್ಯಾರೇಜ್ ಅನ್ನು ನಡೆಸುತ್ತಿದ್ದರು‌. ಜ.23ರಂದು ರಾತ್ರಿ ಗ್ಯಾರೇಜ್ ಕೆಲಸ ಮುಗಿಸಿ ಮನೆಯತ್ತ ವಾಪಸ್ಸಾಗುತ್ತಿದ್ದ ಸಂದರ್ಭ ತಡರಾತ್ರಿ 1.30 ಗಂಟೆ ಸುಮಾರಿಗೆ ಬೈಕ್ ಡಿವೈಡರ್ ಗೆ ಬಡಿದು ತಲೆಗೆ ಗಂಭೀರ ಗಾಯವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.


Share with

Leave a Reply

Your email address will not be published. Required fields are marked *