ಉಪ್ಪಳ: ಮಂಜೇಶ್ವರ ಅಡಿಶನಲ್ ಪ್ರೊಜಕ್ಟ್ ನಲ್ಲಿ ನಿವೃತ್ತಿ ಹೊಂದಿದ ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿಯರಿಗೆ ಬಿಳ್ಕೊಡುಗೆ ಸಮಾರಂಭ ಮಂಜೇಶ್ವರ ಅಡಿಶನಲ್ ಪ್ರೊಜಕ್ಟ್ ನ ಸೀತಾಂಗೋಳಿ ಕಚೇರಿಯಲ್ಲಿ ನಡೆಯಿತು. ವಿವಿಧ ಅಂಗನವಾಡಿಯ ಶಿಕ್ಷಕಿ, ಸಹಾಯಕಿಯರಾದ ಯಶೋದ, ಗಿರಿಜ, ತಂಗಮಣಿ, ರಂಜಿನಿ, ಕುಸುಮ, ರೋಹಿಣಿ, ರತ್ನ, ಸುನಂದ, ಗಿರಿಜ, ಲೀಲ ಮೊದಲಾದವರು ನಿವೃತ್ತಿ ಹೊಂದಿದರು. ಸಿ.ಡಿ.ಪಿ.ಒ ಲೀನಾ ಕೊಟ್ಟಾಯಿ ಎಲ್ಲರನ್ನೂ ಸನ್ಮಾನಿಸಿದರು. ಸೂಪರ್‌ವೈಸರ್‌ಗಳಾದ ರಬಿದಾ ಕಣ್ಣನ್, ಪ್ರೇಮಲತಾ, ನೀತು, ಜ್ಯೋತಿ, ಅನಿತಾ ಶುಭಾಂಸನೆಗೈದರು. ಉಷಾ.ಎಂ.ಎಸ್ ಸ್ವಾಗತಿಸಿ, ತಾರಾ ವಂದಿಸಿದರು. ಸಾಂಸ್ಕoತಿಕ ಕಾರ್ಯಕ್ರಮದಂಗವಾಗಿ ಪುಟಾಣಿ ಅನನ್ಯಳಿಂದ ಭರತ ನಾಟ್ಯ, ಸುಶ್ಮಿತ ರಸಮಂಜರಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.