ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಬಿಂಬ ಪ್ರತಿಷ್ಟಾ ದಿನಾಚರಣೆ ಎ.7ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.


ಪೂರ್ವಾಹ್ನ 7ಕ್ಕೆ ನಿತ್ಯಪೂಜೆ, ಗಣಹೋಮ, ನವಕ ಕಲಶ, 7.30ಕ್ಕೆ ಚಂಡಿಕಾಯಾಗ ಪ್ರಾರಂಭ, 9ಕ್ಕೆ ನಾಗತಂಬಿಲ, 11.30ಕ್ಕೆ ಚಂಡಿಕಾಯಾಗ ಪೂರ್ಣಾಹುತಿ, 12.30ಕ್ಕೆ ಹೂವಿನ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 12.30ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಾಹಿತ್ಯಗಾನ ನೃತ್ಯ ವೈಭವ, ಸಂಜೆ 5.30ಕ್ಕೆ ಭಜನೆ, 6ಕ್ಕೆ ಶ್ರೀ ಶಾಸ್ತಾರ ದೇವರಿಗೆ ರಂಗಪೂಜೆ, 6.30ರಿಂದ ದೀಪಾರಾಧನೆ, ಭಜನೆ, ರಾತ್ರಿ 7.30ರಿಂದ ಹೂವಿನ ಪೂಜೆ, ಮಹಾಪೂಜೆ, ಭಜನೆ, 8.30ಕ್ಕೆ ರಂಗಪೂಜೆ, ಪ್ರಸಾದ ವಿತರಣೆ ನಡೆಯಲಿದೆ.




