ವೀರಕಂಭ ಮಜಿ ಶಾಲೆಯಲ್ಲಿ ಗಾಂಧೀಜಿ  ಹಾಗೂ  ಶಾಸ್ತ್ರಿ ಅವರ ಜನ್ಮದಿನಾಚರಣೆ ಕಾರ್ಯಕ್ರಮ

Share with

ಕಲ್ಲಡ್ಕ: ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಮಜಿ ಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು,

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ  ಭಾವ ಭಾವಚಿತ್ರಕ್ಕೆ ಶಾಲಾ ಮುಖ್ಯ ಶಿಕ್ಷಕಿ, ಶಿಕ್ಷಕ ವೃಂದ ವಿದ್ಯಾರ್ಥಿಗಳು ಪುಷ್ಪ ಸಮರ್ಪಿಸಿದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಬೆನೆಡಿಕ್ಟ ಆಗ್ನೇಸ್ ಮಂಡೋನ್ಸಾ  ಗಾಂಧೀ ಮತ್ತು ಶಾಸ್ತ್ರೀಯವರ ಜೀವನದ ಘಟನೆಗಳನ್ನು ತಿಳಿಸುತ್ತಾ ಒಳ್ಳೆಯ ವಿಚಾರಗಳನ್ನು ನಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು ಇವರ ಜೀವನವು ನಮಗೊಂದು ದಾರಿದೀಪವಾಗಿದೆ ಮಹನೀಯರ ಬದುಕು ನಮಗೆ ಒಳ್ಳೆಯ ಸಂದೇಶಗಳನ್ನು ನೀಡುತ್ತವೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಮತ್ತು  ಭಾಷಣವನ್ನು ಮಾಡಿದರು,

ಶಾಲಾ ದೈಹಿಕ ಶಿಕ್ಷಕ ಇಂದೂಶೇಖರ್ ರವರ ನಾಯಕತ್ವದಲ್ಲಿ ಕವಾಯತು, ಪಥಸಂಚಲನ ಮೂಡಿ ಬಂತು

ಮಕ್ಕಳಿಗೆ ಸಿಹಿ ಊಟವನ್ನು ನೀಡಿ ಸಂಭ್ರಮಿಸಲಾಯಿತು.

ಶಿಕ್ಷಕಿ ಭವ್ಯಶ್ರೀ  ಸ್ವಾಗತಿಸಿ, ಶಿಕ್ಷಕಿ
ಪಲ್ಲವಿ  ವಂದಿಸಿ,ಶಿಕ್ಷಕಿ ಜಯಲಕ್ಷ್ಮಿ
ಕಾರ್ಯಕ್ರಮ ನಿರೂಪಿಸಿದರು.


Share with

Leave a Reply

Your email address will not be published. Required fields are marked *