ಬಿಜೆಪಿ ಸಕ್ರಿಯ ಕಾರ್ಯಕರ್ತ ನವೀನ ನಿಧನ

Share with

ಉಪ್ಪಳ: ಮೀಂಜ ಮದಂಗಲ್ಲು ನಿವಾಸಿ ದಿ. ಕೃಷ್ಣಪ್ಪರವರ ಪುತ್ರ, ಬಿಜೆಪಿ ಸಕ್ರಿಯ ಕಾರ್ಯಕರ್ತ ನವೀನ (43) ಡಿ.23ರಂದು ಬೆಳಿಗ್ಗೆ ನಿಧನ ಹೊಂದಿದರು. ಮನೆಯಲ್ಲಿ ಹೃದಯಾಘಾತ ಉಂಟಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನ ಹೊಂದಿದ್ದಾರೆ.

ಸಾರಣೆ ಮೇಸ್ತ್ರಿ ಕೆಲಸವನ್ನು ನಿರ್ವಹಿಸುತ್ತಿದ್ದರು. ಇತ್ತೀಚೆಗೆ ನಡೆದ ತ್ರಿಸ್ತರ ಪಂಚಾಯತ್ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಮದಂಗಲ್ಲು ಶ್ರೀ ಮಹಾ ಗಣಪತಿ ಭಜನಾ ಮಂದಿರದ ಸಕ್ರಿಯ ಸದಸ್ಯರಾಗಿದ್ದರು.

ಮೃತರು ತಾಯಿ ದೇವಕಿ, ಪತ್ನಿ ಶಿಲ್ಪ ಮಕ್ಕಳಾದ ತನುಷ್, ಸಿಂಚನ, ಸಹೋದರ ಜಯಂತ, ಸಹೋ ದರಿ ಸವಿತಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮನೆಗೆ ವಿವಿಧ ಪಕ್ಷದ ನೇತಾರರು, ಕಾರ್ಯಕರ್ತರು ಸಹಿತ ಭೇಟಿ ನೀಡಿ ಅಂತಿಮನಮನ ಸಲ್ಲಿಸಿದರು. ನಿಧನಕ್ಕೆ ಬಿಜೆಪಿ ಮೀಂಜ ಪಂಚಾ ಯತ್ ಸಮಿತಿ ಸಂತಾಪ ಸೂಚಿಸಿದೆ.


Share with

Leave a Reply

Your email address will not be published. Required fields are marked *