ಮಂಜೇಶ್ವರ: ಕೇಂದ್ರ ಸರಕಾರದ ಯೋಜನೆಗಳ ಸಂಪೂರ್ಣ ಮಾಹಿತಿ ಹಾಗೂ ರಾಜ್ಯ ಎಡ ರಂಗ ಸರಕಾರದ ಬಂಡತನ ಜನತೆಗೆ ತಿಳಿಸಲು ಬಿಜೆಪಿ ಪ್ರತಿ ಪಂಚಾಯತ್ ಗಳಲ್ಲಿ ಹಮ್ಮಿಕೊಂಡಿರುವ ಜನ ಪಂಚಾಯತ್ ಸಾರ್ವಜನಿಕ ಸಭೆ ಯಶಸ್ವಿ ಮಾಡಲು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಕರೆ ನೀಡಿದೆ. ನವಂಬರ್ 28 ಬಾಯರ್ ಪದವಿನಲ್ಲಿ, ನವಂಬರ್ 30 ಪರ್ಮುದೆ ಪೇಟೆಯಲ್ಲಿ, ಡಿಸೆಂಬರ್ 1 ಮಿಯಾಪದವು ಪೇಟೆ ಯಲ್ಲಿ ಕಾರ್ಯಕ್ರಮ ಜರಗಲಿದೆ ಎಂದು ಬಿಜೆಪಿ ತಿಳಿಸಿದೆ.
ಕಾರ್ಯಕ್ರಮದ ಯಶಸ್ವಿಗಾಗಿ ಮಿಂಜ ಬಿಜೆಪಿ ಕಾರ್ಯಕರ್ತರುಗಳ ಸಭೆ ಜರಗಿತು. ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಅಧ್ಯಕ್ಷತೆ ಯಲ್ಲಿ ಸಭೆ ಸೇರಲಾಯಿತು. ಸುಧಾಮ ಗೋಸಾಡ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು. ಮುಖಂಡರಾದ ಚಂದ್ರ ಶೇಕರ ಕೊಡಿ, ನಾರಾಯಣ ನಾಯ್ಕ್, ಪದ್ಮನಾಭ ರೈ, ಕಳ್ಳಿಗೆ ಸದಾನಂದ, ಎ.ಕೆ ಕೈಯಾರ, ಮೋಹನ ಶಾಲಿನಿ, ನಾರಾಯಣ ತುoಗ, ಸತೀಶ, ಕರುಣಾಕರ ಕೊರಿಕಾರ ಉಪಸ್ಥಿತರಿದ್ದರು. ಕೆ.ವಿ ಭಟ್ ಸ್ವಾಗತಿಸಿ ಚಂದ್ರಹಾಸ್ ಕಡ೦ಬಾರ್ ವಂದಿಸಿದರು.