ಬೆಳ್ಳಂಬೆಳಗ್ಗೆ ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ… CCTVಯಲ್ಲಿ ಸೆರೆಯಾಯ್ತು ದೃಶ್ಯ

Share with

ಪಾಟ್ನಾ: ಪಾಟ್ನಾದಲ್ಲಿ ಸೋಮವಾರ (ಸೆ. 09) ಬೆಳ್ಳಂಬೆಳಗ್ಗೆ ಬಿಜೆಪಿ ಮುಖಂಡರೊಬ್ಬರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಪಾಟ್ನಾ ನಗರದ ಮಂಗಲ್ ತಲಾಬ್ ಬಳಿಯ ಮನೋಜ್ ಕಮಾಲಿಯಾ ಗೇಟ್ ಬಳಿ ಈ ಘಟನೆ ನಡೆದಿದ್ದು ಮುಂಜಾನೆ ನಡೆದ ಗುಂಡಿನ ದಾಳಿ ರಾಜಧಾನಿಯನ್ನು ಬೆಚ್ಚಿಬೀಳಿಸಿದೆ.

ಮೃತರನ್ನು ಬಿಜೆಪಿ ಮುಖಂಡ ಶ್ಯಾಮ್ ಸುಂದರ್ ಅಲಿಯಾಸ್ ಮುನ್ನಾ ಶರ್ಮಾ ಎಂದು ಗುರುತಿಸಲಾಗಿದೆ. ಮುಂಜಾನೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಶ್ಯಾಮ್ ಸುಂದರ್ ಮನೋಜ್ ಕಮಾಲಿಯಾ ಗೇಟ್ ಬಳಿ ಬಂದಿದ್ದಾಗ ವಾಹನದಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಶ್ಯಾಮ್ ಸುಂದರ್ ಬಿಜೆಪಿಯಿಂದ ಪಾಟ್ನಾ ಸಿಟಿ ಚೌಕ್‌ನ ಮಾಜಿ ಮುನ್ಸಿಪಲ್ ಬೋರ್ಡ್ ಅಧ್ಯಕ್ಷರಾಗಿದ್ದರು.

ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಗಳು’ ಸೋಮವಾರ ಬೆಳಿಗ್ಗೆ ದುಷ್ಕರ್ಮಿಗಳ ತಂಡ ಬಿಜೆಪಿ ನಾಯಕನನ್ನು ಹತ್ಯೆಮಾಡಿದ್ದು ಈ ಬಗ್ಗೆ ಬೆಳಗ್ಗೆ 6 ಗಂಟೆಗೆ ಮಾಹಿತಿ ಲಭಿಸಿದೆ. ಗುಂಡಿನ ದಾಳಿಯಿಂದ ಗಂಭೀರ ಗಾಯಗೊಂಡಿರುವ ಶ್ಯಾಮ್ ಸುಂದರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅಷ್ಟೋತ್ತಿಗಾಗಲೇ ಶ್ಯಾಮ್ ಸುಂದರ್ ಮೃತಪಟ್ಟಿದ್ದಾರೆ.


Share with

Leave a Reply

Your email address will not be published. Required fields are marked *