ಚೊಚ್ಚಲಬಾರಿಗೆ ಬಿಜೆಪಿ ದೇವರ ನಾಡು ಕೇರಳದಲ್ಲಿ ಖಾತೆ ತೆರೆದಿದೆ. ತ್ರಿಶೂರ್‌ನ ಬಿಜೆಪಿ ಅಭ್ಯರ್ಥಿ ಸುರೇಶ ಗೋಪಿ ಗೆಲುವು ಸಾಧಿಸುವ ಮೂಲಕ ಕೇರಳದಲ್ಲಿ ಬಿಜೆಪಿ ಖಾತೆ ತೆರೆದಿದೆ. ಇನ್ನು ಕೇರಳದ ಮತ್ತೊಂದು ಕ್ಷೇತ್ರ ತಿರುವನಂತಪುರಂನಲ್ಲಿ ಹಾಲಿ ಸಂಸದ ಕಾಂಗ್ರೆಸ್ ನಾಯಕ ಶಶಿ ತರೂರ್‌ಗೆ ಹಿನ್ನಡೆಯಾಗಿದ್ದು, ಬಿಜೆಪಿಯ ರಾಜೀವ್ ಚಂದ್ರಶೇಖರ ಮುನ್ನಡೆ ಸಾಧಿಸಿದ್ದಾರೆ.