ಉಪ್ಪಳ: ಮಂಗಲ್ಪಾಡಿ ಗ್ರಾಮ ಪಂಚಾಯತ್ನಲ್ಲಿ ನಡೆಯುವ ಅವ್ಯವಹಾರದ ವಿರುದ್ದ ಭಾರತೀಯ ಜನತಾ ಪಕ್ಷ ಮಂಗಲ್ಪಾಡಿ ಪಂಚಾಯತ್ ಸಮಿತಿ ಆಶ್ರಯದಲ್ಲಿ ಜ.10ರಂದು ಬೆಳಿಗ್ಗೆ 10ಗಂಟೆಗೆ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ಧರಣಿ ಸತ್ಯಾಗ್ರಹ ನಡೆಯಲಿದೆ.


ಪರಿಶಿಷ್ಟ ಜಾತಿ ವಿಭಾಗದವರಿಗೆ ಕಲಿಕಾ ಭಾಗವಾಗಿ ಗ್ರಾಮ ಪಂಚಾಯತ್ನಿಂದ ಕೊಡಲ್ಪಟ್ಟ ಕಂಪ್ಯೂಟರ್, ಲ್ಯಾಪ್ಟಾಪ್ನ್ನು ನಿಜವಾದ ಅರ್ಜಿದಾರರಿಗೆ ಕೊಡದೆ ಅವರ ನಕಲಿ ಸಹಿಯೊಂದಿಗೆ ಖರೀದಿಸಿ ಮೋಸಗೊಳಿಸಿದ ಕುತಂತ್ರ ಅವ್ಯವಹಾರದ ವಿರುದ್ದ ಈ ಪ್ರತಿಭಟನೆ ನಡೆಯಲಿದೆ. ಬಿಜೆಪಿ ಎಲ್ಲಾ ನೇತಾರರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಈ ಕಾರ್ಯಕಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ವಿನಂತಿಸಿದ್ದಾರೆ.




