ಉಡುಪಿ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಉಡುಪಿ ಜಿಲ್ಲಾ ಯುವ ಮೋರ್ಚಾ ಉಡುಪಿ ನಗರ ವ್ಯಾಪ್ತಿಯಲ್ಲಿ ಪೋಸ್ಟರ್ ಅಭಿಯಾನ ನಡೆಸಿತು.
ಸರ್ಕಾರಿ ಸ್ಥಳ ಸಾರ್ವಜನಿಕ ಸ್ಥಳಗಳಲ್ಲಿ ಜನರ ಜೇಬಿಗೆ ಕತ್ತರಿ ಜಾಹೀರಾತಿನ ಪೋಸ್ಟರ್ ಅಂಟಿಸಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕರಾವಳಿ ಬೈಪಾಸ್, ಕೆಎಸ್ಆರ್ಟಿಸಿ ಬಸ್ ನಿಲ್ದಾಣ ನಗರದ ಪ್ರಮುಖ ಜಂಕ್ಷನ್ ನಲ್ಲಿ ಅಭಿಯಾನ ನಡೆಸಲಾಯಿತು. ಕಾಂಗ್ರೆಸ್ ಸರಕಾರ ಜನರ ಜೇಬಿಗೆ ಕತ್ತರಿ ಹಾಕಿ ಐದು ಭಾಗ್ಯ ನೀಡುತ್ತಿದೆ. ಜನರ ದುಡ್ಡನ್ನು ಕಿತ್ತುಕೊಂಡು ಉಚಿತ ಭಾಗ್ಯ ಎನ್ನುತ್ತಿದೆ ಎಂದು ಉಡುಪಿ ಯುವ ಮೋರ್ಚಾ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.