ಮಂಜೇಶ್ವರ: ಮಂಜೇಶ್ವರ ಅಬಕಾರಿ ಚೆಕ್ಪೋಸ್ಟ್ನಲ್ಲಿ ನಡೆಸಿದ ವಾಹನ ತಪಾಸಣೆಯ ಸಂದರ್ಭದಲ್ಲಿ 30 ಲಕ್ಷ ರೂ. ಕಾಳಧನ ವಶಪಡಿಸಿಕೊಳ್ಳಲಾಗಿದೆ.

ಕೆಎಸ್ಸಾರ್ಟಿಸಿ ಬಸ್ನಲ್ಲಿ ಸಾಗಿಸುತ್ತಿದ್ದ ಕಾಳಧನವನ್ನು ವಶಪಡಿಸಿಕೊಂಡ ಅಬಕಾರಿ ದಳವು ಮಲಪ್ಪುರ ಜಿಲ್ಲೆಯ ಪೆರಿಂದಲ್ವುಣ್ ತಾಲೂಕಿನ ವಡಕಾಂಕರ ಎರುಂಬತ್ತ ವೀಟಿಲ್ ಅಬ್ದುಲ್ ರಹಮಾನ್ ಅವರ ಪುತ್ರ ಹಂಸ (64) ನನ್ನು ವಶಕ್ಕೆ ತೆಗೆದುಕೊಂಡಿದೆ. ಕಾಳಧನ ಮತ್ತು ಹಂಸನನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾಗಿ ಅಬಕಾರಿ ದಳ ತಿಳಿಸಿದೆ. ತಲಪಾಡಿಯಿಂದ ಕಾಸರಗೋಡಿಗೆ ಬಸ್ ಪ್ರಯಾಣಿಸುತ್ತಿತ್ತು.
ಅಬಕಾರಿ ಸರ್ಕಲ್ ಇನ್ಸ್ಪೆಕ್ಟರ್ ಸಿಜಿನ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ತಪಾಸಣೆಯ ಸಂದರ್ಭದಲ್ಲಿ ಹಣಕ್ಕೆ ಸಂಬಂಧಿಸಿ ಯಾವುದೇ ದಾಖಲೆಪತ್ರಗಳಿಲ್ಲದೆ ಸಾಗಿಸಲಾಗುತ್ತಿತ್ತೆಂದು ಅಬಕಾರಿ ದಳ ತಿಳಿಸಿದೆ.
ಇನ್ಸ್ಪೆಕ್ಟರ್ ಆದರ್ಶ್, ಜನಾರ್ದನನ್, ಪ್ರಿವೆಂಟಿವ್ ಆಫೀಸರ್ ನೌಶಾದ್, ಅಬಕಾರಿ ಅಧಿಕಾರಿಗಳಾದ ಪ್ರಶಾಂತ್ ಕುಮಾರ್, ರತೀಶ್ ಯು.ಪಿ. ಮೊದಲಾದವರು ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದರು.




