ಉಪ್ಪಳ: ವಿಶ್ವಹಿಂದೂ ಪರಿಷತ್ ಬಜರಂಗದಳ ಅಡೂರು ಘಟಕ ಇದರ ವತಿಯಿಂದ ಸೇವಾಭಾರತಿ ಕಾಸರಗೋಡು ಹಾಗೂ ಕಾಸರಗೋಡು ಸರಕಾರಿ ಜನರಲ್ ಆಸ್ಪತ್ರೆ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ನಿನ್ನೆ ಬೆಳಿಗ್ಗೆಯಿಂದ ಮಧ್ಯಾಹ್ನ ತನಕ ಅಡೂರು ವಿದ್ಯಾ ಭಾರತಿ ವಿದ್ಯಾಲಯದಲ್ಲಿ ನಡೆಯಿತು. ವಿಶ್ವಹಿಂದೂ ಪರಿಷತ್ ಅಡೂರು ಖಂಡ ಸಮಿತಿ ಕಾರ್ಯದರ್ಶಿ ಅವಿನಾಶ್ ಉದ್ಘಾಟಿಸಿದರು. ಮುಖಂಡರಾದ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಹರೀಶ್ ಶೆಟ್ಟಿ ಬದಿಯಡ್ಕ, ಸುನಿಲ್ ಶೆಟ್ಟಿ ಬದಿಯಡ್ಕ ಹಾಗೂ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.