ಮಂಜೇಶ್ವರ: ಮಜೀರ್ಪಳ್ಳ ಅಗ್ನಿ ಬ್ರಿಗೇಡ್ ಹಾಗೂ ಮಂಗಳೂರು ಕೆಎಂಸಿ ಬ್ಲಡ್ ಬ್ಯಾಂಕ್ ನ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಯಿತು. ಕೋಳ್ಯೂರು ಆಡಿಟೋರಿಯಂ ನಲ್ಲಿ ನಡೆದ ಕಾರ್ಯಕ್ರಮವನ್ನು ಸಂಸದ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು.


ಮಜೀರ್ಪಳ್ಳ ಅಗ್ನಿ ಬ್ರಿಗೇಡ್ ಅಧ್ಯಕ್ಷ ಸೋಮಪ್ಪ ಪಿ ಅಧ್ಯಕ್ಷತೆ ವಹಿಸಿದ್ದರು.
ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಮುಖ್ಯ ಅತಿಥಿಗಳಾಗಿದ್ದರು. ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ವಿಶೇಷ ಅತಿಥಿಗಳಾಗಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ ಎಲ್ ಅಶ್ವಿನಿ,
ಮಿಂಜಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಶೆಟ್ಟಿ, ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್, ಮಿಂಜಾ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಚೇರ್ಮನ್ ಬಾಬು ಕೂಳೂರು, ಮಿಂಜಾ ಗ್ರಾಮ ಪಂಚಾಯತ್ ಸದಸ್ಯ ನಾರಾಯಣ ತುಂಗಾ ಎಂಬಿವರು ಉಪಸ್ತಿತರಿದ್ದರು.
ಈ ಸಂದರ್ಭ ಕೋಳ್ಯೂರು ಪದವು ಅಂಗನವಾಡಿ ಸಹಾಯಕಿ ಲಲಿತಾ ಹಾಗೂ ಕೊಡ್ಲಮೊಗರು ಶ್ರೀ ವಾಣಿ ವಿಜಯ ಪ್ರೌಢಶಾಲೆಯ ನಿವೃತ್ತ ಮುಖಶಿಕ್ಷಕ ಸುಬ್ರಮಣ್ಯ ಭಟ್ ಎಂಬವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಮಜೀರ್ಪಳ್ಳ ಅಗ್ನಿ ಬ್ರಿಗೇಡ್ ನ ಲೋಗೋ ಬಿಡುಗಡೆಗೊಳಿಸಲಾಯಿತು.

ಮಜೀರ್ಪಳ್ಳ ಅಗ್ನಿ ಬ್ರಿಗೇಡ್ ನ ಸದಸ್ಯರು, ಊರವರು ಹಲವಾರು ಮಂದಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು.
ಮಜೀರ್ಪಳ್ಳ ಅಗ್ನಿ ಬ್ರಿಗೇಡ್ ಕೋಶಾಧಿಕಾರಿ ಮನೋಜ್ ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ಮನ್ಮಿತ್ ಧನ್ಯವಾದವಿತ್ತರು.




