2026ರ IPLನ ಮೊದಲ ಪಂದ್ಯವು ಬೆಂಗಳೂರಿನಲ್ಲಿ RCB & SRH ನಡುವೆ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಬೆಂಗಳೂರಿನ ಗಿರಿನಗರದ ರಾಷ್ಟೋತ್ಥಾನ ರಕ್ತ ಕೇಂದ್ರದಲ್ಲಿ ನೂರಾರು RCB ಅಭಿಮಾನಿಗಳು ರಕ್ತದಾನ ಮಾಡಿ, RCB ಗೆಲುವಿಗೆ ಶುಭ ಹಾರೈಸಿದ್ದಾರೆ.

ಪ್ರತಿ ವರ್ಷ RCB ಮ್ಯಾಚ್ಗೂ ಮುನ್ನ ರಕ್ತದಾನ ಮಾಡುತ್ತೇವೆ. ಈ ಬಾರಿಯ ಉದ್ಘಾಟನಾ ಪಂದ್ಯ RCB ಗೆಲ್ಲುವ ವಿಶ್ವಾಸವಿದೆ & ಮತ್ತೊಮ್ಮೆ RCB ಟ್ರೋಫಿ ಗೆಲ್ಲಲಿದೆ. ಕೊಹ್ಲಿಯನ್ನು ಗೌಂಡ್ಲ್ಲಿ ನೋಡೋದೇ ಚೆಂದ ಎಂದು ಅಭಿಮಾನಿಗಳು ಹೇಳಿದ್ದಾರೆ.




