ಬಿಎಂಟಿಸಿ ಬಸ್ ಬ್ರೇಕ್ ಫೇಲ್

Share with

ಬೆಂಗಳೂರಿನ ನಾಗದೇವನಹಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಬಿಎಂಟಿಸಿ ಬಸ್ ಬ್ರೇಕ್ ಫೇಲ್ ಆಗಿದೆ. ಶಿರ್ಕೆ ಸರ್ಕಲ್‌ನಿಂದ ನಾಗರಬಾವಿಗೆ ಹೊರಟಿದ್ದ ಬಸ್ ಇದ್ದಕ್ಕಿದ್ದಂತೆ ಬ್ರೇಕ್ ವಿಫಲವಾಗಿ ರಸ್ತೆ ಪಕ್ಕದ ಡಾಬಾ, ಅಂಗಡಿಗೆ ನುಗ್ಗಿದೆ. ರಸ್ತೆಯಲ್ಲಿ ಯಾರೂ ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಅಪಘಾತದಿಂದಾಗಿ ಪ್ರಯಾಣಿಕರು ಭಯಭೀತಗೊಂಡು ತಕ್ಷಣವೇ ಬಸ್‌ನಿಂದ ಇಳಿದರು.


Share with