
ವಿವಾಹಿತೆ ಜೊತೆಗೆ ಪ್ರಿಯಕರನ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ಮೂಡಬಿದಿರೆ ತಾಲೂಕಿನಲ್ಲಿ ನಡೆದಿದೆ. ಬಡಗಮಿಜಾರು ನಿವಾಸಿ ನಮೀಕ್ಷಾ ಶೆಟ್ಟಿ & ಬಾಗಲಕೋಟೆ ನಿವಾಸಿ ನಿದ್ದೋಡಿಯ ಪ್ರಶಾಂತ್ ಮೃತ ದುರ್ದೈವಿಗಳು.

ಗಂಡನನ್ನು ಬಿಟ್ಟು ತವರು ಮನೆಗೆ ಸೇರಿದ್ದ ನಮೀಕ್ಷಾಗೆ, ಪ್ರಶಾಂತ್‌ನ ಪರಿಚಯವಾಗಿತ್ತು. ತಮ್ಮಿಬ್ಬರ ಜಗಳದಲ್ಲಿ ಮೊದಲಿಗೆ ಆಕೆಯನ್ನು ಬಾವಿಗೆ ತಳ್ಳಿ, ಬಳಿಕ ತಾನು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಮೂಡಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




