ತಲಪಾಡಿಯ ಬಾ‌ರ್ ನಲ್ಲಿ ಮೃತದೇಹ ಪತ್ತೆ

Share with

ತಲಪ್ಪಾಡಿ: ಕೇರಳ – ಕರ್ನಾಟಕ ಗಡಿ ಸಮೀಪದಲ್ಲಿರುವ ತಲಪಾಡಿಯ ಬಾ‌ರ್ ಒಂದರಲ್ಲಿ ಮೃತದೇಹ ಪತ್ತೆಯಾಗಿದೆ.

ರಾ.ಹೆದ್ದಾರಿ ಬದಿಯಲ್ಲಿರುವ ತಲಪಾಡಿಯ ನಿಸರ್ಗ ಬಾರ್ ಏಂಡ್ ರೆಸ್ಟಾರೆಂಟನ್ನು ಇಂದು ಬೆಳಿಗ್ಗೆ ತೆರೆಯಲು ಬಂದಾಗ ಬಾರ್ ನ ಮೂಲೆಯೊಂದರಲ್ಲಿ ಕುಸಿದು ಬಿದ್ದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರು ಪತ್ತೆಯಾಗಿದ್ದಾರೆ. ಕೂಡಲೇ ಉಳ್ಳಾಲ ಪೋಲೀಸರಿಗೆ ತಿಳಿಸಿದ್ದು, ಅವರು ಬಂದು ಪರಿಶೀಲಿಸಿದಾಗ ವ್ಯಕ್ತಿ ಮೃತಪಟ್ಟಿದ್ದರು ಎನ್ನಲಾಗಿದೆ. ಮೃತ ಪಟ್ಟ ವ್ಯಕ್ತಿಯನ್ನು ಮೀಯಪದವು ಮೂಲದವರು ಎಂದು ಹೇಳಲಾಗುತ್ತಿದ್ದು ನಿಖರವಾಗಿ ತಿಳಿದು ಬಂದಿಲ್ಲ.

ಪೋಲೀಸರು ಮೃತದೇಹವನ್ನು ಪೋಸ್ಟ್ ಮಾರ್ಟಂ ಮಾಡಿಸಲು ಆಸ್ಪತ್ರೆಗೆ ಸಾಗಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯ ನಂತರವಷ್ಟೇ ಮರಣ ಕಾರಣ ಸ್ಪಷ್ಟವಾಗಲಿದೆ.

ಮೃತ ವ್ಯಕ್ತಿ ಶುಕ್ರವಾರ ರಾತ್ರಿ ಬಾರ್ ಗೆ ಬಂದಿದ್ದು, ಮದ್ಯಸೇವನೆ ಮಾಡಿ ಮರಳುವುದನ್ನು ಕೆಲವರು ಕಂಡಿದ್ದರೆನ್ನಲಾಗಿದೆ.

ಮೃತ ವ್ಯಕ್ತಿಯ ಕುರಿತಾಗಿ ಹೆಚ್ಚುವರಿ ಶೋಧ ನಡೆಯುತ್ತಿದೆ.


Share with

Leave a Reply

Your email address will not be published. Required fields are marked *