ಉಡುಪಿ: ನಗರದ ಖಾಸಗಿ ಶಾಲೆಯೊಂದಕ್ಕೆ ಸೋಮವಾರ(ಜೂನ್ 16) ಇ-ಮೇಲ್ ಮೂಲಕ ಬಾಂಬ್ ಸ್ಪೋಟದ ಬೆದರಿಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಶಾಲೆಗೆ ಆಗಮಿಸಿದ ಪೊಲೀಸರು ಶೋಧ ಕಾರ್ಯ ನಡೆಸಿರುವುದಾಗಿ ವರದಿ ತಿಳಿಸಿದೆ.
ಶ್ವಾನದಳ, ವಿಧ್ವಂಸಕ ನಿಗ್ರಹ ತಂಡ ಮತ್ತು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಆಗಮಿಸಿದ ಪೊಲೀಸರು, ಶಾಲಾ ಆವರಣದಲ್ಲಿ ತೀವ್ರ ತಪಾಸಣೆ ನಡೆಸಿದರು. ಸದ್ಯ ಯಾವುದೇ ಬಾಂಬ್ ಅಥವಾ ಅಪಾಯಕಾರಿ ಅಂಶ ಪತ್ತೆಯಾಗಿಲ್ಲ.
ಆದುದರಿಂದ ಇದೊಂದು ಹುಸಿ ಇ ಮೇಲ್ ಬೆದರಿಕೆ ಕರೆ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದುದರಿಂದ ಇದೀಗ ಶಾಲೆಯನ್ನು ಪರಿಶೀಲಿಸಿ, ಆಡಳಿತ ಮಂಡಳಿಗೆ ಬಿಟ್ಟುಕೊಡಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ