ರಾಜ್ಯದ ಮೂರು ಶಾಲೆಗಳಿಗೆ ಬಾಂಬ್ ಬೆದರಿಕೆ!

Share with

ರಾಜ್ಯದ ಮೂರು ಶಾಲೆಗಳನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಇ-ಮೇಲ್ ಬೆದರಿಕೆ ಸಂದೇಶ ಬಂದಿದೆ.

ಹಾಸನದ ವಿಜಯನಗರದ ಮಂಜೇಗೌಡ ಎಂಬವರಿಗೆ ಸೇರಿದೆ ವಿದ್ಯಾಸೌಧ ಪಬ್ಲಿಕ್ ಶಾಲೆ, ಇಂಡಸ್ಟ್ರಿಯಲ್ ಏರಿಯಾ & ಕೆ ಆರ್ ಪುರಂ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಈ ಇ-ಮೇಲ್ ಸಂದೇಶದ ಕುರಿತು ಶಾಲಾ ಪ್ರಾಂಶುಪಾಲರು ಹಾಸನ ನಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ತಡರಾತ್ರಿಯೇ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯದಳ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.


Share with