CM ಸಿದ್ದರಾಮಯ್ಯ ವಿರುದ್ಧ EX-CM ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಉಪಚುನಾವಣೆ ಪ್ರಚಾರದ ಭಾಗವಾಗಿ ದಾವಣಗೆರೆಯಲ್ಲಿ ಮಾತನಾಡಿದ ಬೊಮ್ಮಾಯಿ, 5 ಲಕ್ಷ ಕೋಟಿ ಸಾಲ ಮಾಡಿದ ‘ದಾಖಲೆಯ ಸಾಲಗಾರ ಸಿದ್ದರಾಮಯ್ಯ’ ಎಂದು ಬಣ್ಣಿಸಿದ್ದಾರೆ.

ಇಂತಹ ಭ್ರಷ್ಟ ಸರ್ಕಾರವನ್ನೇ ನಾವು ನೋಡಿರಲಿಲ್ಲ. ಯಾವುದೇ ಕಚೇರಿಗೆ ಹೋದ್ರೂ ಭ್ರಷ್ಟಾಚಾರ. ಇವರು ನೀಡುವ ಅಕ್ಕಿಯಲ್ಲಿ ಭ್ರಷ್ಟಾಚಾರ ನಡೀತಿದೆ. ರೇಷನ್ ಅಂಗಡಿ ಅಸೋಸಿಯೇಷನ್ ಕಂಪ್ಲೇಂಟ್ ಮಾಡಿದೆ ಎಂದು ಆರೋಪಿಸಿದ್ದಾರೆ.




