ಬೆಳ್ತಂಗಡಿ: ಈಜಲು ನೀರಿಗಿಳಿದ ಬಾಲಕನೋರ್ವ ಮುಳುಗಿ ಮೃತಪಟ್ಟ ಘಟನೆ ನಡ ಗ್ರಾಮದ ಅಂತ್ರಾಯಪಲ್ಕೆ ಎಂಬಲ್ಲಿ ಮಾ.28ರ ಶನಿವಾರ ಸಂಜೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಕುಂಟಿನಿ ನಿವಾಸಿ ಹಸನಬ್ಬ ಅವರ ಪುತ್ರ ಮಹಮ್ಮದ್ ಹಫೀಝ್(14) ಸಾವನ್ನಪ್ಪಿದ ಬಾಲಕ.
ಅಂತ್ರಾಯಪಲ್ಕೆ ಎಂಬಲ್ಲಿರುವ ಅಂತ್ರಾಯ ಗುಂಡಿಗೆ ಈಜಲು ಹೋದ ನಾಲ್ವರು ಬಾಲಕರಲ್ಲಿ ಓರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಮೃತದೇಹವನ್ನು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಬೆಳ್ತಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.




