ಅಬ್ಬಗದಾರಗ ವೀರಭದ್ರ ಸಪರಿವಾರ ದೇವಸ್ಥಾನದಲ್ಲಿ ಬ್ರಹ್ಮ ಕಲಶಾಭಿಷೇಕ, ಬ್ರಹ್ಮಕುಂಭ ಅಭಿಷೇಕ ಸಂಪನ್ನ

Share with

ಉಡುಪಿ: ಹಾವಂಜೆ ಇರ್ಮಾಡಿಬೀಡು ಅಬ್ಬಗದಾರಗ ವೀರಭದ್ರ ಸಪರಿವಾರ ದೇವಸ್ಥಾನದಲ್ಲಿ ಶ್ರೀನಾಗ ದೇವರು- ಬ್ರಹ್ಮ ಕಲಶಾಭಿಷೇಕ ಹಾಗೂ ಶ್ರೀ ವೀರಭದ್ರ ಸ್ವಾಮಿ ಬ್ರಹ್ಮಕುಂಭ ಅಭಿಷೇಕವು ಮಹಾ ಅನ್ನಸಂತರ್ಪಣೆಯೊಂದಿಗೆ ವಿದ್ವಾನ್ ಹೆರ್ಗೆ ಜಯರಾಮ ತಂತ್ರಿಗಳ ಮಾರ್ಗದರ್ಶನದಲ್ಲಿ ವೇದಮೂರ್ತಿ ಗುರುರಾಜ್ ಭಟ್ ಕೊಳಲಗಿರಿಯವರ ಸಹಕಾರದಲ್ಲಿ ವಿಜೃಂಭಣೆಯಿಂದ ನೆರವೇರಿತು.
ವೀರಭದ್ರ ಸ್ವಾಮಿ ಸಾನ್ನಿಧ್ಯದಲ್ಲಿ ನವಗ್ರಹ ಹೋಮ, ಚಂಡಿಕಾ ಹೋಮ, ಶಾಂತಿ-ಪ್ರಾಯಶ್ಚಿತ್ತ ಹೋಮಗಳು, ಕಲ್ಕುಡ ಸಾನ್ನಿಧ್ಯದಲ್ಲಿ ಕಲಶ ಪ್ರತಿಷ್ಠಾ ಪ್ರಧಾನ ಹೋಮ, ಕಲಶಾಭಿಷೇಕ, ಪ್ರಸನ್ನ ಪೂಜೆ ಹಾಗೂ ನಾಗ-ಬ್ರಹ್ಮದೇವರ ಪುನಃಪ್ರತಿಷ್ಠಾಪನೆ, ತಿಲ ಹೋಮ, ನಾಗಬ್ರಹ್ಮ ದೇವರಿಗೆ ಕಲಶ ಪ್ರತಿಷ್ಠೆೆ, ಕಲಶಾಭಿಷೇಕ, ಪ್ರಸನ್ನ ಪೂಜೆ ಹಾಗೂ ವೀರಭದ್ರ ದೇವರಿಗೆ ಬ್ರಹ್ಮಕುಂಭಾಭಿಷೇಕ ಜರುಗಿತು. ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.


Share with

Leave a Reply

Your email address will not be published. Required fields are marked *