ಸ್ವದೇಶಿ ತಂತ್ರಜ್ಞಾನದೊಂದಿಗೆ ಸಿದ್ಧಗೊಂಡ ಬಿಎಸ್​ಎನ್​ಎಲ್ 4ಜಿ, ಯಾವಾಗ ಸಿಗಲಿದೆ ಹೈ ಸ್ಪೀಡ್ ಇಂಟರ್ನೆಟ್?

Share with

ಟೆಲಿಕಾಂ ಖಾಸಗಿ ಸಂಸ್ಥೆಗಳೊಂದಿಗೆ ಸ್ಪರ್ಧಿಸಲಾಗದೆ ನೆಲಕಚ್ಚಿದ್ದ ಬಿಎಸ್​ಎನ್​ಎಲ್​ ಮತ್ತೆ ಮೇಲೇಳಲು ಸಿದ್ಧವಾಗಿದೆ. ಈಗ ಸ್ವದೇಶಿ ತಂತ್ರಜ್ಞಾನದ ಮೂಲಕ 4ಜಿ ಹಾಗೂ 5ಜಿ ಸಂಪರ್ಕದೊಂದಿಗೆ ಗ್ರಾಹಕರನ್ನು ಆಕರ್ಷಿಸಲು ಪ್ರಯತ್ನಿಸುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರ ಹೈಸ್ಪೀಡ್ ಇಂಟರ್ನೆಟ್ ಲಭ್ಯವಾಗಲಿದೆ.

ಅದು 2001ರ ಸಮಯ, ಬಿಎಸ್​ಎನ್​ಎಲ್ ಸಿಮ್ ಖರೀದಿಸುವುದು ಕಷ್ಟದ ವಿಷಯವಾಗಿತ್ತು. ಸಿಮ್​ ಪಡೆದುಕೊಳ್ಳಲು 6 ರಿಂದ ಒಂದು ವರ್ಷದವರೆಗೆ ಕಾಯಬೇಕಿತ್ತು. ಸಿಮ್ ಪಡೆಯಲು ಜನರು ಸರದಿಯಲ್ಲಿ ನಿಲ್ಲುತ್ತಿದ್ದರು. ಆ ಬಳಿಕ ಖಾಸಗಿ ಟೆಲಿಕಾಂ ಕಂಪನಿಗಳು ಬಂದು ಬಿಎಸ್​ಎನ್​ಎಲ್ ಹಿಂದೆ ಬಿದ್ದಿತ್ತು. ಈಗ ಸುಮಾರು 23 ವರ್ಷಗಳ ಬಳಿಕ ಬಿಎಸ್​ಎನ್​ಎಲ್ ಮೇಲೆ ಮತ್ತೆ ಭರವಸೆ ಮೂಡಲು ಶುರುವಾಗಿದೆ. ಬಿಎಸ್​ಎನ್​ಎಲ್ 4ಜಿ ಹಾಗೂ 5ಜಿ ಕುರಿತು ಕೇಂದ್ರ ಟೆಲಿಕಾಂ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕೆಲವು ಮಾಹಿತಿ ನೀಡಿದ್ದಾರೆ. ಬಿಎಸ್‌ಎನ್‌ಎಲ್ ಶೀಘ್ರದಲ್ಲೇ ದೇಶಾದ್ಯಂತ 4ಜಿ ಸೇವೆಗಳನ್ನು ಆರಂಭಿಸಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಈ ಬಿಎಸ್​ಎನ್​ಎಲ್ 4ಜಿ ನೆಟ್​ವರ್ಕ್​ ಸಂಪೂರ್ಣವಾಗಿ ಭಾರತದಲ್ಲಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ಆಧರಿಸಿದೆ. ಶೀಘ್ರದಲ್ಲೇ 5ಜಿಗೆ ಅಪ್​ಗ್ರೇಡ್ ಮಾಡಲಾಗುವುದು ಎಂದು ಸಿಂಧಿಯಾ ಹೇಳಿದ್ದಾರೆ. ಬಿಎಸ್​ಎನ್​ಎಲ್ ಗ್ರಾಹಕರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ.

ಬಿಎಸ್​ಎನ್​ಎಲ್ ತನ್ನ 4G ನೆಟ್‌ವರ್ಕ್ ಅನ್ನು ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದೊಂದಿಗೆ ಸ್ವಾವಲಂಬಿ ಭಾರತ ಅಡಿಯಲ್ಲಿ ಸಿದ್ಧಪಡಿಸಿದೆ. ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ 4ಜಿ ನೆಟ್‌ವರ್ಕ್ ಆರಂಭಿಸಿದಾಗ ಬಿಎಸ್‌ಎನ್‌ಎಲ್ ಏಕೆ ಮಾಡಬಾರದು ಎಂದು ಹಲವರು ಕೇಳಿದ್ದರು. ನಾವು ಸರ್ಕಾರಿ ಕಂಪನಿಯ ನೆಟ್‌ವರ್ಕ್ ಅನ್ನು ಅಭಿವೃದ್ಧಿಪಡಿಸಬೇಕಾದರೆ, ನಾವು ಚೀನಾ ಅಥವಾ ಯಾವುದೇ ವಿದೇಶಿ ದೇಶದ ಉಪಕರಣಗಳನ್ನು ಬಳಸುವುದಿಲ್ಲ ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪವಾಗಿತ್ತು.


Share with

Leave a Reply

Your email address will not be published. Required fields are marked *