ಉತ್ತರ ಪ್ರದೇಶದಲ್ಲಿ ಮತಾಂತರಿ ಮನೆಗೆ ಬುಲ್ಡೋಜರ್ ದಾಳಿ..!

Share with

ಲಕ್ನೋ: ಉತ್ತರ ಪ್ರದೇಶದಲ್ಲಿ ಮತ್ತೂಮ್ಮೆ ಬುಲ್ಡೋಜರ್ ಸದ್ದು ಕೇಳಿ ಬಂದಿದೆ. ಅಕ್ರಮ ಮತಾಂತರ ಆರೋಪದಲ್ಲಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ವು ಬಂಧಿಸಿರುವ ಜಲಾಲುದ್ದೀನ್ ಅಲಿಯಾಸ್ ಛಂಗುರ್ ಬಾಬಾಗೆ ಸೇರಿರುವ ಬಲರಾಮ್‌ಪುರದಲ್ಲಿರುವ ಅಕ್ರಮ ಕಟ್ಟಡಗಳನ್ನು ಮಂಗಳವಾರ ಧ್ವಂಸಗೊಳಿಸಲಾಗಿದೆ.

ಜಲಾಲುದ್ದೀನ್‌ನ ತನಿಖೆ ನಡೆಯುತ್ತಿದ್ದು, ಈ ವೇಳೆ ಆತ ಸಮಾಜಘಾತುಕನಷ್ಟೇ ಅಲ್ಲದೆ ದೇಶದ್ರೋಹಿಯೂ ಹೌದು ಎಂದು ತಿಳಿದುಬಂದಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ. ಅಲ್ಲದೆ ಈತನ ಅಕ್ರಮ ಮತಾಂತರ ಗ್ಯಾಂಗ್‌ನಲ್ಲಿ ಶಾಮೀಲಾಗಿರುವ ಇನ್ನುಳಿದವರ ಮೇಲೂ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.

ಜಲಾಲುದ್ದೀನ್ ಮತ್ತು ಆತನ ಸಹಾಯಕಿ ನೀತು ಅಲಿಯಾಸ್ ನಸೀನ್‌ಳನ್ನು ಎಟಿಎಸ್ ತಂಡವು ಬಲರಾಮ್‌ಪುರದಲ್ಲಿ ಶನಿವಾರ ಬಂಧಿಸಿತ್ತು.


Share with

Leave a Reply

Your email address will not be published. Required fields are marked *