
ಕಠ್ಮಂಡು: ನೇಪಾಳದ ತನಹುನ್ ಜಿಲ್ಲೆಯಲ್ಲಿ ಭಾರತೀಯ ಪ್ರಯಾಣಿಕರಿದ್ದ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಮರ್ಸ್ಯಾಂಗ್ಡಿ ನದಿಗೆ ಉರುಳಿ ಬಿದ್ದ ಪರಿಣಾಮ 14 ಪ್ರಯಾಣಿಕರು ಮೃತಪಟ್ಟು 26 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯುಪಿ (ಉತ್ತರ ಪ್ರದೇಶ) ನೋಂದಣಿ ಹೊಂದಿರುವ ಬಸ್ಸು ಇದಾಗಿದ್ದು (ಎಫ್ಟಿ 7623) ಬಸ್ಸು ತನಾಹುನ್ ಜಿಲ್ಲೆಯ ಐನಾ ಪಹಾರಾ ಪ್ರದೇಶ ತಲುಪುತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿ ಬಿದ್ದಿದೆ” ಎಂದು ತನಹುನ್ ಜಿಲ್ಲೆಯ ಡಿಎಸ್ಪಿ ದೀಪ್ಕುಮಾರ್ ರಾಯಾ ತಿಳಿಸಿದ್ದಾರೆ.
ನೇಪಾಳ ವಿಪತ್ತು ನಿರ್ವಹಣಾ ತರಬೇತಿ ಶಾಲೆಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಮಾಧವ್ ಪೌಡೆಲ್ ನೇತೃತ್ವದ 45 ಪೊಲೀಸ್ ಸಿಬ್ಬಂದಿಗಳ ತಂಡವು ಅಪಘಾತ ಸ್ಥಳಕ್ಕೆ ತಲುಪಿದ್ದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.
New Updates: ನೇಪಾಳ ಬಸ್ ದುರಂತ: ಸಾವಿನ ಸಂಖ್ಯೆ 27ಕ್ಕೆ…




