ಪುತ್ತೂರು: ಇಲ್ಲಿನ ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜು ಇಲ್ಲಿ ಜೂ.1ರಂದು ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಡ್ರೈವ್ 2024ಉದ್ಯೋಗ ಮೇಳ ನಡೆಸಲಾಯಿತು.
ಕಾಲೇಜಿನ ಅಂತಿಮ ಪದವಿ ವಿಭಾಗದ ಬಿ.ಕಾಂ, ಫ್ಯಾಶನ್ ಡಿಸೈನ್ ಹಾಗೂ ಇಂಟೀಯರ್ ಡಿಸೈನ್ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿವಿಧ ಜಾಗತೀಕ ಉದ್ಯೋಗ ವಲಯದ ಪ್ರಚಲಿತದಲ್ಲಿರುವ ಸುಮಾರು 15ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸಿದ್ದವು.
ಹೋಟೇಲ್ ಅವತಾರ್, ಹೋಟೆಲ್ ಸ್ಕೈ ವ್ಯೂವ್, ಗ್ಲೋ ಟಚ್, ಮಾಸ್ಟರ್ ಪ್ಲಾನರಿ, ದ್ವಾರಕ ಕನ್‌ಸ್ಟ್ರಕ್ಷನ್, ಹ್ಯೂಂಡಯ್, ರಿಲಯನ್ಸ್, ಎಸ್.ಬಿ.ಐ, ಟೊಯೊಟಾನಂತಹ ಹಲವು ಕಂಪೆನಿಗಳು ಭಾಗವಹಿಸಿದ್ದವು.