ಉಪ್ಪಿನಂಗಡಿ: ಉಪ್ಪಿನಂಗಡಿಯ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾಗಿ ಸುದೀರ್ಘ ಕಾಲ ಸೇವೆಯನ್ನು ಸಲ್ಲಿಸಿದ್ದ ಅಬ್ದುಲ್ ರಝಾಕ್ ಹಾಜಿ (75) ಅವರು ಅಲ್ಪಕಾಲದ ಅನಾರೋಗ್ಯದಿಂದ ಸೆ.22ರಂದು ರಾಮನಗರದ ತನ್ನ ಮನೆಯಲ್ಲಿ ನಿಧನರಾದರು.
ಕೆನರಾ ಬಸ್‍ನ ಮಾಲಕರಾಗಿದ್ದ ಇವರು ಖಾಸಗಿ ಬಸ್ ಯೂನಿಯನ್ ನಲ್ಲೂ ಪದಾಧಿಕಾರಿಯಾಗಿದ್ದರು. ಮೃತರು ಪತ್ನಿ ಆಯಿಷಾ, ಪುತ್ರರಾದ ಮೆಹಬೂಬ್, ಅನ್ವರ್, ಸಿರಾಜ್, ಶಕೀಲ್, ಸಮೀಮ್ ಮತ್ತು ಪುತ್ರಿಯರಾದ ಮಮ್ತಾಝ್, ಸಹನಾಝ್ ಅವರನ್ನು ಅಗಲಿದ್ದಾರೆ.