ಕೊಂಡೆವೂರು ಆಶ್ರಮದಲ್ಲಿ ಕರ್ಕಾಟಕ ಮಾಸದ ಔಷಧೀಯ ಗಂಜಿ ಕಾರ್ಯಕ್ರಮ

Share with

ಉಪ್ಪಳ: ಶ್ರೀ ನಿತ್ಯಾನಂದ ಯೋಗಾಶ್ರಮಕೊಂಡೆವೂರು ಮಠದಲ್ಲಿ ಪೂಜ್ಯ ಶ್ರೀಗಳವರ 22 ನೇ ಚಾತುರ್ಮಾಸ್ಯದ ಸುಸಂದರ್ಭ ಆ .3 ರಂದು ನಡೆದ ಕರ್ಕಾಟಕ ಮಾಸದ ಔಷಧೀಯ ಗಂಜಿ ಕಾರ್ಯಕ್ರಮವನ್ನು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಬಳಿಕ ಆಶೀರ್ವಚನ ನೀಡಿದ ಅವರು ಅಡುಗೆ ಕೋಣೆಯೇ ಔಷಧಾಲಯ ಆಗಿರುವ ಸಂದರ್ಭದಲ್ಲಿ ಈಗ ನಮ್ಮ ಆಹಾರ ಪದ್ಧತಿಯ ಕಾರಣಕ್ಕಾಗಿ ಔಷಧಾಲಯವನ್ನೇ ನಂಬಿಕೊಳ್ಳುವ ಕೆಟ್ಟ ಪರಿಸ್ಥಿತಿ ಇಂದು ಬಂದಿದೆ. ಇದಕ್ಕಾಗಿ ಆಹಾರ ಪದ್ಧತಿಯಲ್ಲಿ ಜನ ಜಾಗೃತಿ ಮೂಡಿಸಲು ಕರ್ಕಾಟಕ ಮಾಸದಲ್ಲಿ ನಮ್ಮ ಪರಿಸರದಲ್ಲಿಯೇದೊರಕುವ ಗಿಡ, ಬಳ್ಳಿ ಎಲೆಗಳನ್ನು ಬಳಸಿ ಔಷಧೀಯ ಗಂಜಿ ಎಂಬ ವಿಶಿಷ್ಟ ಕಾರ್ಯಕ್ರಮಕಳೆದ ಹಲವು ವರ್ಷಗಳಿಂದಜರಗುತ್ತಿದ್ದು ಅನೇಕರು ಇದರ ಪ್ರಯೋಜನ ಪಡಕೊಂಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಖ್ಯಾತ ವೈದ್ಯರಾದ ಡಾ. ರಾಧಾಕೃಷ್ಣ ಬಂದ್ಯೋಡ್‌ರವರು ಶ್ರೀ ಮಠದ ಆರೋಗ್ಯ ಯೋಜನೆಯಡಿಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದ ಅರಿವು ಇನ್ನಷ್ಟು ಜನರಿಗೆ ತಲುಪಿ ಉತ್ತಮ ಆರೋಗ್ಯವಂತರಾಗಬೇಕೆoದು ಅಪೇಕ್ಷಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಸರಗೋಡು ಲೋಕಸಭಾ ಸದಸ್ಯರಾದ ರಾಜಮೋಹನ್ ಉಣ್ಣಿತ್ತಾನ್‌ರವರು ಧಾರ್ಮಿಕ ಕೇಂದ್ರದಲ್ಲಿ ಇಂತಹ ಕಾರ್ಯಕ್ರಮ ನಡೆಯುವುದನ್ನು ಶ್ಲಾಘಿಸಿದರು. ತಲಪಾಡಿ ಶಾರದಾ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂದೀಪ್ ಬೇಕಲ್‌ರವರು ಜನ ಸಾಮಾನ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವ ಶ್ರೀ ಮಠದ ಚಟುವಟಿಕೆಗಳ ಬಗ್ಗೆ ಸಂತಸ ವ್ಯಕ್ತ ಪಡಿಸಿದರು. ಮಾಜಿ ಎಂ.ಎಲ್.ಪಿ ಶ್ರೀ ಮೋನಪ್ಪ ಭಂಡಾರಿ, ಧಾರ್ಮಿಕ ಮುಂದಾಳು ಶ್ರೀ ರವೀಶ್ ತಂತ್ರಿ ಕುಂಟಾರು, ಡಾ. ಸುಮಲತ ರಾಧಾಕೃಷ್ಣನ್‌ ಯತಿ ವಿನಯಸಾಗರ್ ಮಧ್ಯಪ್ರದೇಶ ಅತಿಥಿಗಳಾಗಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಅನೇಕ ಪ್ರಶಸ್ತಿಗಳಿಗೂ ಭಾಜನರಾದ ತ್ರಿಶೂರಿನ ಎಂ.ಡಿ ಸೀತಾರಾಮ ಆಯುರ್ವೇಧಿಕ್‌ಸ್ಪೆಷಾಲಿಟಿ ಆಸ್ಪತ್ರೆಯ ನಿರ್ವಾಹಕ ನಿರ್ದೇಶಕರಾದ ಡಾ.ಡಿ. ರಾಮನಾಥನ್ ಅವರಿಗೆ “ಆಯುಶ್ರೀ 2025” ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

ಸಭಾಕಾರ್ಯಕ್ರಮಆರಂಭವಾಗುವುದಕ್ಕಿಂತ ಮೊದಲು ಔಷಧೀಯ ಗಿಡ ಮೂಲಿಕೆಗಳ ಕುರಿತು ನಾಟಿವೈದ್ಯರಾದ ಪವಿತ್ರನ್ ಗುರುಕ್ಕಳರವರು ಪ್ರಸಾದಿಕವಾಗಿ ಮಾತನಾಡಿದರು.

ಕರ್ಕಾಟಕ ಮಾಸದಲ್ಲಿ ಔಷಧೀಯ ಗಂಜಿಯ ಮಹತ್ವವನ್ನು ಖ್ಯಾತ ನಾಟಿ ವೈದ್ಯರಾದ ಶ್ರೀ ಟಿ.ಟಿ.ಅರವಿಂದಾಕ್ಷನ್‌ ವೈದ್ಯರ್ ಮತ್ತು ಪೈವಳಿಕೆಯಮೆಡಿಕಲ್ ಆಫೀಸರ್ ರಾದ ಡಾ. ಗಣೇಶ್ ಕುಮಾ‌ರ್ ತಿಳಿಸಿದರಲ್ಲದೆ ಮನೆ ಮದ್ದಿನ ಮಾಹಿತಿಯನ್ನೂ ನೀಡಿದರು.

ಶ್ರಾವಣ್ಯ. ಕೊಂಡೆವೂರು ಇವರ ಪ್ರಾರ್ಥನೆಯೊಂದಿಗೆ ಆರಂಭಗೊoಡ ಕಾರ್ಯಕ್ರಮದ ಸ್ವಾಗತವನ್ನು ಶ್ರೀಮಠದ ಆರೋಗ್ಯ ಯೋಜನೆಯ ನಿತ್ಯಾನಂದ ಆಯುರ್ವೇದ ಸಂರಕ್ಷಣಾ ಸಮಿತಿ ಕೇರಳದ ಅಧ್ಯಕ್ಷರಾದ ಜಯದೇವನ್ ಕಣ್ಣೂರು ಮಾಡಿದರು. ಕೆ.ಯಂ, ಗಂಗಾಧರ್ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ದಿನಕ‌ರ್ ಹೊಸಂಗಡಿ ಮತ್ತು ಪ್ರಶಾಂತ್ ತೋಲಂಬರ ನಡೆಸಿಕೊಟ್ಟರು.

ಬಳಿಕ ಕೇರಳದ ಖ್ಯಾತನಾಟಿ ವೈದ್ಯರುಗಳು ವಿವಿಧ ಬಗೆಯ ಸಸ್ಯ ಎಲೆ, ಬಳ್ಳಿಗಳನ್ನು ಉಪಯೋಗಿಸಿ ತಯಾರಿಸಿದ ಅನೇಕ ವಿವಿಧ ಖಾಧ್ಯಗಳನ್ನು ಒಳಗೊಂಡ ಔಷಧೀಯ ಗಂಜಿಯ ಜೊತೆ ಆಗಮಿಸಿದ್ದು 2000 ಕ್ಕಿಂತ ಹೆಚ್ಚು ಜನರು ಸವಿದು ಸಂತಸ ಪಟ್ಟರಲ್ಲದೆ ಆಸಕ್ತಿಯಿಂದ ಮಾಹಿತಿಗಳನ್ನು ಪಡಕೊಂಡರು.


Share with

Leave a Reply

Your email address will not be published. Required fields are marked *