ಇನ್ಮುಂದೆ EVM ನಲ್ಲಿ ಅಭ್ಯರ್ಥಿಗಳ ಕಲರ್ ಫೋಟೋ

Share with

ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಿಸುವ ಮುನ್ನವೇ ಭಾರತೀಯ ಚುನಾವಣಾ ಆಯೋಗ ಹೊಸ ಮಾರ್ಗಸೂಚಿಗಳನ್ನ ಪರಿಷ್ಕರಿಸಿದೆ. ವಿದ್ಯುನ್ಮಾನ ಮತಯಂತ್ರ (EVM) ಮತಪತ್ರಗಳ ವಿನ್ಯಾಸದಲ್ಲಿ ಬದಲಾವಣೆ ತಂದಿದೆ. ಅದರಂತೆ ಅಭ್ಯರ್ಥಿಗಳ ಗುರುತನ್ನು ಸುಲಭವಾಗಿ ಪತ್ತೆಹಚ್ಚಲು ಇನ್ಮುಂದೆ ಇವಿಎಂನಲ್ಲಿ ಕಪ್ಪು-ಬಿಳುಪಿನ ಫೋಟೋ ಬದಲಿಗೆ ಕಲರ್‌ ಫೋಟೋ ಅಳವಡಿಸಲಾಗುತ್ತದೆ.

ಮತದಾರರಿಗೆ ಅಭ್ಯರ್ಥಿಗಳ ಚಿತ್ರ ಸ್ಪಷ್ಟವಾಗಿ ಕಾಣಬೇಕೆಂಬುದು ಇದರ ಉದ್ದೇಶವಾಗಿದೆ. ಅಲ್ಲದೇ ಅಭ್ಯರ್ಥಿಗಳ ಸರಣಿ ಸಂಖ್ಯೆಯು 30 ಗಾತ್ರದಷ್ಟು ಫಾಂಟ್‌ನಲ್ಲಿ ಇರಲಿದೆ. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲೇ ಈ ಮಾರ್ಗಸೂಚಿ ಅನ್ವಯವಾಗಲಿದ್ದು, ಮುಂದಿನ ದಿನಗಳಲ್ಲಿ ದೇಶಾದ್ಯಂತ ಚುನಾವಣೆಗಳಿಗೆ ಅನ್ವಯವಾಗಲಿದೆ. ಚುನಾವಣೆಗಳ ಗುಣಮಟ್ಟ ಮತ್ತು ವಿಶ್ವಾಸಾರ್ಹತೆ ಸುಧಾರಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ಮಹತ್ವದ ಹೆಜ್ಜೆ ಇದಾಗಿದೆ. 


Share with

Leave a Reply

Your email address will not be published. Required fields are marked *