ನಗರದ ಪೆಟ್ರೋಲ್ ಪಂಪ್ ಬಳಿಯೇ ಹೊತ್ತಿ ಉರಿದ ಕಾರು!

Share with

ಮಂಗಳೂರು: ನಗರದ ಲೇಡಿಹಿಲ್ ನ ಪೆಟ್ರೋಲ್ ಪಂಪ್ ಎದುರು ರವಿವಾರ ಅಪರಾಹ್ನ ಮಾರುತಿ 800 ಕಾರಿಗೆ ಬೆಂಕಿ ಹೊತ್ತಿಕೊಂಡಿತು. ಕೂಡಲೇ ಪೆಟ್ರೋಲ್ ಪಂಪ್ ಸಿಬಂದಿ ಬೆಂಕಿ ನಂದಿಸಿದರು.

ಅದೃಷ್ಟವಶಾತ್ ಭಾರೀ ಸಂಭಾವ್ಯ ಅವಘಡ ತಪ್ಪಿದೆ. ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು ರಸ್ತೆಯ ಅಂಚಿನಲ್ಲೇ ಇರುವ ಪೆಟ್ರೋಲ್ ಪಂಪ್ ಮುಂಭಾಗ ನಿಂತಿತು ಎಂದು ಕದ್ರಿ ಅಗ್ನಿಶಾಮಕ ಇಲಾಖೆಯವರು ತಿಳಿಸಿದ್ದಾರೆ. ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.


Share with

Leave a Reply

Your email address will not be published. Required fields are marked *