ಉಪ್ಪಳ: ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿಹೊಡೆದು ಮೂರು ಮಂದಿಗೆ ಗಾಯಗೊಂಡಿದೆ. ಮಂಗಳವಾರ ಮಧ್ಯಾಹ್ನ ಪೈವಳಿಕೆ ಬಳಿಯಲ್ಲಿ ಘಟನೆ ನಡೆದಿದೆ. ಕಾರು ಪೈವಳಿಕೆ ಭಾಗದಿಂದ ಬಾಯಿಕಟ್ಟೆಗೆ ಸಂಚರಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಸಂಬಂಧಿಕರಾದ ಇಬ್ಬರು ಯುವಕರು, ಓರ್ವೆ ಯುವತಿ ಇದ್ದರು. ಇವರನ್ನು ಸ್ಥಳೀಯರು ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದ್ದಾರೆ.