ಬೆಳ್ತಂಗಡಿ: ರಸ್ತೆ ಬದಿ ನಿಂತಿದ್ದ ವೇಳೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಗಂಭೀರವಾಗಿ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಅರಮಲೆ ಬೆಟ್ಟದ ಸಮೀಪದ ರಸ್ತೆಯಲ್ಲಿ ಜ.13ರಂದು ಸಂಭವಿಸಿದೆ.
ಗಾಯಾಳು ಮಹಿಳೆಯನ್ನು ಸ್ಥಳೀಯ ಅಂಜಲಿ ಶೆಣೈ ಎಂದು ಗುರುತಿಸಲಾಗಿದೆ. ಅಂಜಲಿ ಅವರು ರಸ್ತೆ ಬದಿ ನಿಂತಿದ್ದ ಮಾರುತಿ ಒಮಿನಿ ಕಾರೊಂದರ ಪಕ್ಕದಲ್ಲಿ ರಸ್ತೆ ದಾಟಲು ನಿಂತಿದ್ದ ವೇಳೆ ಅತಿ ವೇಗದಲ್ಲಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಅವರಿಗೆ ಡಿಕ್ಕಿ ಹೊಡೆದು ಗಂಭೀರ ಸ್ವರೂಪದ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಂಜಲಿ ಶೆಣೈ ಮಾಜಿ ತಾಲೂಕು ಪಂಚಾಯತ್ ಸದಸ್ಯ ಗೋಪಿನಾಥ ನಾಯಕ್ ಅವರ ಪತ್ನಿ ಎಂದು ಗುರುತಿಸಲಾಗಿದೆ. ರಸ್ತೆ ಬದಿಯಲ್ಲಿದ್ದ ಮಾರುತಿ ಒಮಿನಿಗೂ ಕಾರು ಗುದ್ದಿದೆ. ಸದ್ಯ ಅಪಘಾತದ ಬಗ್ಗೆ ಬೆಳ್ತಂಗಡಿ ಸಂಚಾರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.