ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಬರ್ಬರತೆಯನ್ನು ಕಂಡು ನಾಡಿನ ಜನ ಮರುಗುತ್ತಿದ್ದರೆ ಕೆಲವು ಕಿಡಿಗೇಡಿಗಳು ಹತ್ಯೆಯನ್ನು ಸಂಭ್ರಮಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿಬಿಟ್ಟಿದ್ದಾರೆ.
‘ಹಿಂದೂ ಮಂತ್ರ’ ಹೆಸರಿನ ಇನ್ಸ್ಟಾ ಗ್ರಾಮ್ ಪೇಜ್ ನಲ್ಲಿ ಈ ಪೋಸ್ಟ್ ಮಾಡಲಾಗಿದೆ. ’15 ನಿಮಿಷದಲ್ಲಿ ನಾಲ್ಕು ಮುಸ್ಲಿಮರನ್ನು ಕೊಂದು ವಿಶ್ವ ದಾಖಲೆ ನಿರ್ಮಿಸಿದ್ದಾನೆ’ ಎನ್ನುವ ಶೀರ್ಷಿಕೆಯನ್ನು ಈ ಪೇಜ್ ಹೊಂದಿದೆ. ಪೋಸ್ಟ್ ನಲ್ಲಿ ಹತ್ಯೆಯ ಆರೋಪಿ ಪ್ರವೀಣ್ ಅರುಣ್ ಚೌಗುಲೆ ತಲೆಗೆ ಕಿರೀಟ ತೊಡಿಸಲಾಗಿದೆ. ಉಡುಪಿಯ ಹುಡುಗಿಯರ ವಿಚಾರದಲ್ಲಿ ಯಾರೂ ಬಂದಿಲ್ಲ, ಆದ್ದರಿಂದ ನಾವು ಈ ವಿಚಾರಕ್ಕೆ ಬರುವುದಿಲ್ಲ ಎನ್ನುವ ಅಡಿಬರಹವನ್ನು ಈ ಪೋಸ್ಟ್ ಹೊಂದಿದೆ. ಪೋಸ್ಟ್ ಗಮನಿಸಿದ ಪೊಲೀಸರು, ‘ಹಿಂದೂ ಮಂತ್ರ’ ಇನ್ಸ್ಟಾ ಗ್ರಾಮ್ ಪೇಜ್ ಮೇಲೆ ಪ್ರಕರಣ ದಾಖಲಿಸಿದ್ದಾರೆ.