ಬಂಟ್ವಾಳ: ಯುವತಿಯೊಬ್ಬಳು ಬಿ.ಸಿ ರೋಡು ಬಸ್ ನಿಲ್ದಾಣದಲ್ಲಿ ಬಸ್ಸನ್ನೇರುತ್ತಿದ್ದ ವೇಳೆ ಆರೋಪಿಯೋರ್ವ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ಅ.4ರಂದು ನಡೆದಿದೆ.
ಬಿ.ಸಿ ರೋಡಿನಿಂದ ಮಂಗಳೂರು ಕಡೆಗೆ ಹೋಗುವ ಬಸ್ ಹತ್ತುವಾಗ ಈ ರೀತಿಯ ಘಟನೆ ನಡೆದಿದ್ದು, ಅನುಚಿತ ವರ್ತನೆಯ ಕುರಿತು ಯುವತಿ ಪ್ರಶ್ನಿಸಿದ ವೇಳೆ ಮುಂದೆಯೂ ಹೀಗೆ ಮಾಡುತ್ತೇನೆ, ಏನು ಮಾಡುತ್ತೀಯಾ ಎಂದು ಉಡಾಫೆಯ ಉತ್ತರವನ್ನು ನೀಡಿದ್ದಾನೆ.
ಬಳಿಕ ಬಸ್ ಮಂಗಳೂರು ಬಲ್ಲಾಳ್‌ಬಾಗ್ ತಲುಪಿದಾಗ ಇಬ್ಬರು ಬಂದು ಆರೋಪಿಯನ್ನು ಕರೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.