ಮಂಜೇಶ್ವರ : ಉಪ್ಪಳ ಫತ್ವಾಡಿಯಲ್ಲಿ ಕೊಲ್ಲಿ ಉದ್ಯೋಗಿಯ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಚೆನ್ನಾಭರಣ, ನಗದು ಹಾಗೂ ಬೆಲೆಬಾಳುವ ಇಲಕ್ಟ್ರೋನಿಕ್ ಸಾಮಾಗ್ರಿಗಳನ್ನು ಕದ್ದೊಯ್ದಿದ್ದಾರೆ.
ಫತ್ವಾಡಿ ನಿವಾಸಿ ಅಬ್ದಲ್ಲ ಎಂಬವರ ಮನೆಯಲ್ಲಿ ಕಳವು ನಡೆದಿದೆ.
ಮಂಗಳವಾರ ಬೆಳಿಗ್ಗೆ ಅಬ್ದಲ್ಲ ರವರ ಪತ್ನಿ ಮನೆ ಬಾಗಿಲು ತೆರೆಯಲು ಬಂದಾಗ ಕಳವು ನಡೆದ ವಿಷಯ ಗಮನಕ್ಕೆ ಬಂದಿದೆ.
ಮನೆಯ ಅಡುಗೆ ಕೋಣೆಯ ಭಾಗದ ಗೇಟ್ ಮುರಿದು ಕಳ್ಳರು ಒಳಗೆ ನುಗ್ಗಿದ್ದಾರೆ. ಕಪಾಟಿನಲ್ಲಿ ತೆಗೆದಿಡಲಾಗಿದ್ದ ಚಿನ್ನಾಭರಣ ಹಾಗೂ ನಗದನ್ನು ದೋಚಿದ ಬಳಿಕ ಸುಮಾರು ಒಂದೂವರೆ ಲಕ್ಷ ಬೆಲೆ ಬಾಳುವ ಇಲಕ್ಟ್ರೋನಿಕ್ ಸಾಮಾಗ್ರಿಗಳನ್ನು ಕದ್ದೊಯ್ದಿದ್ದಾರೆ.
ಪ್ರವಾಸ ಜೀವನವನ್ನು ಮುಗಿಸಿ ಊರಿನಲ್ಲೇ ಏನಾದರೂ ವ್ಯಾಪಾರ ಮಾಡಿ ಜೀವಿಸುವ ಉದ್ದೇಶದಿಂದ ಇಂಕ್ಟ್ರೋನಿಕ್ ಸಾಮಾಗ್ರಿಗಳನ್ನು ತಂದಿಡಲಾಗಿತ್ತು. ಮನೆಯ ಸಿ ಸಿ ಟಿವಿ ಕ್ಯಾಮರಾವನ್ನು ಬಟ್ಟೆಯಲ್ಲಿ ಮುಚ್ಚಿದ ರೀತಿಯಲ್ಲಿ ಪತ್ತೆ ಹಚ್ಚಲಾಗಿದೆ. ಸಿ ಸಿ ಟಿವಿಯ ಹಾರ್ಡ್ ಡಿಸ್ಕ್ ಕಳ್ಳರು ಕೊಂಡೊಯಿದ್ದಾರೆ. ಮಂಜೇಶ್ವರ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ.
ಸಮೀಪ ಕಾಲದಲ್ಲಿ ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಕಳವು ಪ್ರಕರಣಗಳು ಹೆಚ್ಚಾಗುತ್ತಾ ಇದೆ. ಎಟಿಎಂ ಗೆ ಹಣ ತುಂಬಿಸಲು ಬಂದ ವಾಹನದಿಂದ ಹಾಡು ಹಗಲೇ ಅರ್ಧ ಕೋಟಿ ರೂ. ಕಳ್ಳರ ತಂಡ ಎಗರಿಸಿ ಪರಾರಿಯಾಗಿದೆ. ಇದರ ಬಳಿಕ ಈ ಪ್ರದೇಶದ ವಿವಿಧೆಡೆಗಳಲ್ಲಿ ಭಾರೀ ದೊಡ್ಡ ಕಳ್ಳತನ ನಡೆದಿದ್ದರೂ ಪೊಲೀಸರಿಗೆ ಇಷ್ಟರ ತನಕ ಯಾರನ್ನೂ ಬಂಧಿಸಲು ಸಾಧ್ಯವಾಗಿಲ್ಲ