ಉಪ್ಪಳ: ಕುಬಣೂರು ಶ್ರೀ ರಾಮ ಎ.ಯು.ಪಿ ಶಾಲೆಯಲ್ಲಿ ಸಂಭ್ರಮದಿoದ ಪ್ರವೇಶೋತ್ಸವ ನಡೆಯಿತು. ಪಿ.ಟಿ.ಎ ಅಧ್ಯಕ್ಷ ವರದರಾಜ್ ಭಂಡಾರಿ ಅಧ್ಯಕ್ಷತೆ ವಹಿಸಿದರು. ಮಂಗಲ್ಪಾಡಿ ಪಂಚಾಯತ್ ಸದಸ್ಯ ವಿಜಯ ಕುಮಾರ್ ರೈ ಉದ್ಘಾಟಿಸಿದರು. ಎಸ್.ಎಸ್.ಜಿ ಅಧ್ಯಕ್ಷ ಅಶೋಕ್ ಕುಮಾರ್ ಹೊಳ್ಳ, ಎಂ.ಪಿ.ಟಿ.ಎ ಅಧ್ಯಕ್ಷೆ ಜ್ಞಾನೇಶ್ವರೀ ಆಚಾರ್ಯ, ಶಾಲಾ ಮೆನೇಜರ್ ಮೋಕ್ಷದಾ.ಬಿ.ಶೆಟ್ಟಿ, ಟ್ರಸ್ಟಿ ಎಂ.ಪಿ ಬಾಲಕೃಷ್ಣ ಶೆಟ್ಟಿ ಶುಭಾಂಶನೆಗೈದರು. ಶಾಲಾ ಮುಖ್ಯೋಪಧ್ಯಾಯಿನಿ ಮೀರಾವತಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾನಿಧ್ಯ ಪ್ರಾರ್ಥನೆ ಹಾಡಿದರು. ಹರಿದಾಸ್ ಮಾಸ್ತರ್ ನಿರೂಪಿಸಿದರು. ಸತೀಶ್ ಮಾಸ್ತರ್ ವಂದಿಸಿದರು. ನೂರಾರು ಮಕ್ಕಳು, ಹೆತ್ತವರು ಪಾಲ್ಗೊಂಡರು. ಈ ವೇಳೆ ಸಿಹಿ ತಿಂಡಿಯನ್ನು ವಿತರಿಸಲಾಯಿತು.