ವಿಟ್ಲ: ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಈದುಲ್ ಅಝ್‌ಹಾ ( ಬಕ್ರೀದ್) ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಖತೀಬ್ ಕೆ.ಎಂ ಅಬ್ಬಾಸ್ ಫೈಝಿ ಪುತ್ತಿಗೆ ಬಕ್ರೀದ್ ಸಂದೇಶ ನೀಡಿ ,ನಮಾಝ್ ನ ನೇತೃತ್ವ ವಹಿಸಿದರು.
ಇಬ್ರಾಹಿಂ ನೆಬಿಯವರ ಬಲಿದಾನ ಹಾಗೂ ಇಸ್ಮಾಯಿಲ್ ನೆಬಿಯವರ ತ್ಯಾಗದ ಚರಿತ್ರೆಯನ್ನು ವಿವರಿಸಿದ ಖತೀಬರು ,ಸತ್ಕರ್ಮದಿಂದ ದೇವ ಸಾಮಿಪ್ಯವನ್ನು ಪಡೆಯಲು ಕರೆ ನೀಡಿದರು.
ವಿಟ್ಲ ಟೌನ್ ಅಶ್ ಅರಿಯ್ಯ ಜುಮಾ ಮಸೀದಿಯಲ್ಲಿ ಅಬ್ಬಾಸ್ ಮದನಿ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಊರಿನ ಜಮಾಅತ್ ಸದಸ್ಯರು ಭಾಗವಹಿಸಿ, ಪರಸ್ಪರ ಈದ್ ಶುಭಾಶಯ ಕೋರಿದರು.