ನವದೆಹಲಿ: ರಾಷ್ಟ್ರ ರಾಜಧಾನಿಯ ಬಾರಾಖಂಬಾ ಪ್ರದೇಶದಲ್ಲಿ ಚಾರ್ಟೆಡ್ ಅಕೌಂಟೆಂಟ್ ಒಬ್ಬ ಹೀಲಿಯಂ ಅನಿಲವನ್ನು ಉಸಿರಾಡುವ ಮೂಲಕ ತನ್ನ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಧೀರಜ್ ಕನ್ಸಾಲ್ ಎಂಬಾತ ಗುರುಗ್ರಾಮ್‌ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ, ಇಂಡಿಯಾಮಾರ್ಟ್‌ನಲ್ಲಿ ಹುಡುಕಿದ ನಂತರ ಗಾಜಿಯಾಬಾದ್‌ನ ಪೂರೈಕೆದಾರರಿಂದ ಹೀಲಿಯಂ ಅನಿಲವನ್ನು ಪಡೆದಿದ್ದನು.
ಕಠಿನ ನಿರ್ಧಾರ ತೆಗೆದುಕೊಳ್ಳುವ ಮೊದಲು, ಧೀರಜ್ ಫೇಸ್‌ಬುಕ್‌ನಲ್ಲಿ ಒಂದು ಸಂದೇಶವನ್ನು ಪೋಸ್ಟ್ ಮಾಡಿದ್ದ “ಸಾವು ನನಗೆ ಜೀವನದ ಅತ್ಯಂತ ಸುಂದರವಾದ ಕ್ಷಣ. ದಯವಿಟ್ಟು ನನ್ನ ಸಾವಿನ ಬಗ್ಗೆ ದುಃಖಿಸಬೇಡಿ. ಆತ್ಮಹ*ತ್ಯೆ ತಪ್ಪಲ್ಲ ಏಕೆಂದರೆ ನನ್ನ ಮೇಲೆ ನನಗೆ ಯಾವುದೇ ಜವಾಬ್ದಾರಿಗಳಿಲ್ಲ.” ಎಂದು ಬರೆದುಕೊಂಡಿದ್ದ.
ಧೀರಜ್ ಕನ್ಸಾಲ್ ಜುಲೈ 20 ರಿಂದ 28 ರವರೆಗೆ ಎಂಟು ದಿನಗಳಿಗೆ ಫ್ಲಾಟ್ ಬುಕ್ ಮಾಡಿದ್ದ. 3,500 ರೂ. ನೀಡಿ ಹೀಲಿಯಂ ಖರೀದಿಸಿದ್ದ ಎಂದು ತಿಳಿದು ಬಂದಿದೆ.
ನನ್ನ ನಿರ್ಧಾರಕ್ಕೆ ಯಾರನ್ನೂ ದೂಷಿಸಬಾರದುಎಂದು ಸ್ಪಷ್ಟಪಡಿಸಿ, ಇದು ನನ್ನ ಆಯ್ಕೆ. ನನ್ನ ಜೀವನದಲ್ಲಿ ನಾನು ಭೇಟಿಯಾದ ಪ್ರತಿಯೊಬ್ಬ ವ್ಯಕ್ತಿಯೂ ನನಗೆ ನಿಜವಾಗಿಯೂ ದಯೆ ತೋರಿಸಿದ್ದರು. ಆದ್ದರಿಂದ ದಯವಿಟ್ಟು ಈ ಕಾರಣದಿಂದಾಗಿ ಯಾರಿಗೂ ತೊಂದರೆ ನೀಡಬೇಡಿ ಎಂದು ನಾನು ಪೊಲೀಸರು ಮತ್ತು ಸರಕಾರವನ್ನು ವಿನಂತಿಸಿಕೊಳ್ಳುತ್ತೇನೆ” ಎಂದು ಪೋಸ್ಟ್ ನಲ್ಲಿ ಬರೆದಿದ್ದಾನೆ.
ತನ್ನ ಅಸ್ತಿತ್ವವನ್ನು ಸುಳ್ಳು ಎಂದು ಬಣ್ಣಿಸಿ, ಈ ಭೂಮಿಯ ಮೇಲೆ ಮತ್ತೆ ಹುಟ್ಟಲು ಬಯಸುವುದಿಲ್ಲ, ನನ್ನನ್ನು ನು ದ್ವೇಷಿಸುತ್ತೇನೆ,ನಾನು ಸೋತವನು” ಎಂದು ಬರೆದಿದ್ದಾನೆ.




