ವಂಚನೆ ಪ್ರಕರಣದಲ್ಲಿ ತೇಜೋವಧೆ: ಪೊಲೀಸ್‌ ಆಯುಕ್ತರಿಗೆ ಸಾಲುಮರದ ತಿಮ್ಮಕ್ಕ ದೂರು

Share with

ಬೆಂಗಳೂರು: ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ವಂಚನೆ ಪ್ರಕರಣದ ಸಂಬಂಧ ತಮ್ಮ ಹಾಗೂ ತಮ್ಮ ಪುತ್ರನ ಹೆಸರನ್ನು ಬಳಸಿಕೊಂಡು ಸುಳ್ಳು ಸುದ್ದಿ ಹಬ್ಬಿಸಿ ತೇಜೋವಧೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಸಾಲುಮರದ ತಿಮ್ಮಕ್ಕ ಅವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಬುಧವಾರ ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ನೀಡಿದ ಅವರು, ಸುಳ್ಳು ಸುದ್ದಿ ಹರಡಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮನವಿ ಸಲ್ಲಿಸಿದರು.

ವೃಕ್ಷ ಸಂಪತ್ತಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟು ಬದುಕಿದ್ದೇವೆ. ತಮ್ಮ ಪುತ್ರ ಉಮೇಶ್ ಕೂಡ ಎರಡು ದಶಕಗಳಿಂದಲೂ ಮರ, ಗಿಡಗಳನ್ನು ಸಾಕು ಸಲಹುದುವರಲ್ಲೇ ತೊಡಗಿಸಿಕೊಂಡಿದ್ದೇನೆ. ತಮ್ಮ ಈ ಇಳಿವಯಸ್ಸಿನಲ್ಲಿ ಸುಳ್ಳು ಹಾಗೂ ಅಪಪ್ರಚಾರ ಕಂಡು ಮಾನಸಿಕವಾಗಿ ನೊಂದಿದ್ದೇನೆ. ಸುದ್ದಿ ಹಬ್ಬಿಸುವವರಿಗೆ ಅದು ದೈನಂದಿನ ಕೆಲಸ ಆಗಿರಬಹುದು. ಆದರೆ ನಮ್ಮ ಮನಸ್ಸಿನ ಮೇಲೆ ಭಾರೀ ಆಘಾತ ಬೀರಿದೆ ಎಂದು ದೂರಿನಲ್ಲಿ ವಿವರಿಸಿದ್ದು ಹಾಗೂ ಸುಳ್ಳು ಸುದ್ದಿ ಹರಡಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಸಾಲುಮರದ ತಿಮ್ಮಕ್ಕ ಅವರು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *