ಆಗಸ್ಟ್‌ನಲ್ಲಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯಲಿರುವ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಿರುವ 48 ದಿನಗಳ ಮಂಡಲೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರ್ಯಾಯ ಪುತ್ತಿಗೆ ಮಠದಿಂದ ಆಹ್ವಾನಿಸಲಾಯಿತು.
ಶ್ರೀಮಠದ ಪರವಾಗಿ ಬೆಂಗಳೂರಿನ ಶಾಖಾ ಮಠದ ಮುಖ್ಯಸ್ಥ ಎ.ಬಿ. ಕುಂಜಾರ್ ಮತ್ತು ಸುಗುಣೇಂದ್ರ ಶ್ರೀಗಳ ಕಾರ್ಯದರ್ಶಿ ರತೀಶ ತಂತ್ರಿ ಅವರು ಶ್ರೀಕೃಷ್ಣ-ಮುಖ್ಯಪ್ರಾಣರ ಪ್ರಸಾದ ನೀಡಿ ಆಮಂತ್ರಿಸಿದರು.
ಆ.1ರಿಂದ ಸೆ.15ರ ವರೆಗೆ 48 ದಿನಗಳ ಕಾಲ ಮಂಡಲೋತ್ಸವ ನಡೆಯಲಿದ್ದು, ಬಳಿಕ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಲಿದೆ ಎಂದು ಸಿಎಂಗೆ ಮಾಹಿತಿ ನೀಡಿದರು.