ಯುವತಿಗೆ ಮಗು ಕರುಣಿಸಿದ ಪ್ರಕರಣ: ಆರೋಪಿಯ ತಂದೆ ದೇವಸ್ಥಾನದ ಚಾಕರಿ ಮಾಡಿದರೆ ಧ್ವಜಸ್ತಂಭದಡಿಯಲ್ಲಿ ಪ್ರತಿಭಟನೆ; ತಾಯಿಯ ಆಗ್ರಹ

Share with

ಪುತ್ತೂರು: ಪುತ್ತೂರಿನ ಯುವತಿಗೆ ಮಗು ಕರುಣಿಸಿದ ಆರೋಪಿ ಕೃಷ್ಣ ಜೆ. ರಾವ್ ತಂದೆ ಪಿ. ಜಿ. ಜಗನ್ನಿವಾಸ ರಾವ್ ಅವರು ಮಗನಿಗೆ ಸಂತ್ರಸ್ತ ಯುವತಿಯ ಜತೆಗೆ ಮದುವೆ ಮಾಡಿಸುವುದಾಗಿ ಒಪ್ಪಿ ವಚನ ಭ್ರಷ್ಟರಾಗಿದ್ದಾರೆ ಎಂದು ಆರೋಪಿಸಿರುವ ವಿಶ್ವಕರ್ಮ ಯುವಮಿಲನ ಸಂಘಟನೆಯು ಅವರಿಗೆ ಪುತ್ತೂರು ದೇವಸ್ಥಾನದಲ್ಲಿ ಯಾವುದೇ ಚಾಕರಿ ಕೆಲಸಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದೆ.

ಗುರುವಾರ ಸಂಘಟನೆಯ ಸ್ಥಾಪಕಾಧ್ಯಕ್ಷ ವಿಕ್ರಮ್ ಆಚಾರ್ಯ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಜಗನ್ನಿವಾಸ ರಾವ್ ಅವರು ದೇವಸ್ಥಾನದ ಒಂದಷ್ಟು ಕೆಲಸಗಳಲ್ಲಿ ಸಕ್ರೀಯರಾಗಿದ್ದು, ಅವರನ್ನು ಯಾವುದೇ ಚಾಕರಿಯಲ್ಲಿ ನೇಮಿಸಿಕೊಳ್ಳದಂತೆ ನಾವು ಈಗಾಗಲೇ ತಿಳಿಸಿದ್ದೇವೆ. ಆದರೆ ಅದನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದರು.

ಧ್ವಜಸ್ತಂಭ ಬಳಿ ಕುಳಿತು ನ್ಯಾಯ ಕೇಳುವೆ

ಸಂತ್ರಸ್ತ ಯುವತಿಯ ತಾಯಿ ನಮಿತಾ ಆಚಾರ್ಯ ಮಾತನಾಡಿ, ಪುತ್ತೂರು ಧ್ವಜಾರೋಹಣದ ಸಂದರ್ಭ ಆ ವ್ಯಕ್ತಿ ಚಾಕರಿ ನಿರ್ವಹಿಸುತ್ತಿದ್ದರೆ ಧ್ವಜಸ್ತಂಭದ ಬಳಿ ಕುಳಿತುಕೊಂಡು ನ್ಯಾಯ ಕೇಳಲಿದ್ದೇನೆ ಎಂದರು.


Share with

Leave a Reply

Your email address will not be published. Required fields are marked *