ಗಂಟಲಿನಲ್ಲಿ ಚಿಕನ್ ಮೂಳೆ ಸಿಲುಕಿ ಮಗು ಸಾವು!

Share with

ಗಂಟಲಿನಲ್ಲಿ ಚಿಕನ್ ಪೀಸ್ ಸಿಲುಕಿ ಸುಶಾಂತ್ ಎಂಬ 2 ವರ್ಷದ ಮಗು ಮೃತಪಟ್ಟ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ರಾಜಂಪೇಟ್ ನ ಮಣ್ಣೂರಿನಲ್ಲಿ ನಡೆದಿದೆ.

ಮಗು ಚಿಕನ್ ತುಂಡನ್ನು ತಿನ್ನಲು ಪ್ರಯತ್ನಿಸಿದೆ. ತುಂಡು ದೊಡ್ಡದಾಗಿದ್ದರಿಂದ ಗಂಟಲಿನಲ್ಲಿ ಸಿಲುಕಿಕೊಂಡಿದೆ. ಪರಿಣಾಮ ಉಸಿರಾಡಲು ಸಾಧ್ಯವಾಗದೇ ಪ್ರಜ್ಞೆ ತಪ್ಪಿದೆ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮಗು ಕೊನೆಯುಸಿರೆಳೆದಿದೆ. ಚಿಕನ್ ಪೀಸ್ ಗಂಟಲಿನಲ್ಲಿ ಸಿಲುಕಿದ ಕಾರಣ ಮಗು ಸಾವನ್ನಪ್ಪಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ


Share with