
ಮಿಯಪದವು: ಮೀಂಜ ಪಂಚಾಯತ್ ಮಾದರಿ ಕುಟುಂಬಶ್ರಿ ಯ ಐ ಸಿ ಡಿ ಯಸ್ ನ ನೇತ್ರತ್ವದಲ್ಲಿ ಬಾಲಸಭೆ ಮಕ್ಕಳಿಗೆ ಬಾಲಸಂಗಮ ಕಾರ್ಯಕ್ರಮ ಜರಗಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಮಿಂಜ ಪಂಚಾಯತ್ ಕುಟುಂಬಶ್ರಿ ಚಯರ್ ಪರ್ಸನ್ ಶಾಲಿನಿ ಬಿ ಶೆಟ್ಟಿ ನೆರವೇರಿಸಿ ಮಾತನಾಡಿ ” ಮಕ್ಕಳ ಶ್ರಿಜನಾತ್ಮಕ ಚಿಂತನೆಗಳನ್ನು ಬೆಳೆಸಲು ಹಾಗೂ ಅದನ್ನು ಪ್ರಕಟಪಡಿಸಲು ವೇದಿಕೆಯನ್ನು ನೀಡುತ್ತದೆ.ಇದರಲ್ಲಿ ಭಾಗವಹಿಸಿದವರು ಉತ್ತಮ ಪ್ರಜೆಗಳಾಗಿ ಬದುಕಲು ಪ್ರೇರಣೆ ನೀಡುತ್ತದೆ.ಆದ್ದರಿಂದ ಬಾಲಸಭೆಯಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ಹೆಚ್ಚು ಹೆಚ್ಚು ಬಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸಿ ಡಿ ಯಸ್ ಜತೆ ಚಯರ್ ಪರ್ಸನ್ ಲತಾ ದೇವಿ,ಬಾಲಸಭೆ ಆರ್ ಪಿ ಜಯಲಕ್ಷ್ಮಿ ಶೆಟ್ಟಿ ,ಸಂಪನ್ಮೂಲ ವ್ಯಕ್ತಿ ಅಶೋಕ್ ಕೊಡ್ಲಮೊಗರು ,ಸಿ ಡಿ ಯಸ್ ಸದಸ್ಯರಾದ ಯಶೋದಾ ,ಪವಿತ್ರ,ಶ್ರೀದೇವಿ,ಸೀತಾ,ನಸೀಮಾ ಮೊದಲಾದವರು ಉಪಸ್ಥಿತರಿದ್ದರು.ಶಮಿನ ರವರು ಸ್ವಾಗತಿಸಿ ಪದ್ಮಜಾ ರವರು ವಂದಿಸಿದರು. ನಂತರ ಸಂಪನ್ಮೂಲ ವ್ಯಕ್ತಿ ಅಶೋಕ್ ಕೊಡ್ಲಮೊಗರು ರವರಿಂದ ವಿವಿಧ ಆಟಗಳ ಜೊತೆಗೆ ಮಾನಸಿಕ ಒತ್ತಡವನ್ನು ನಿಯಂತ್ರಿಸುವ ತರಗತಿ ನಡೆಸಿಕೊಟ್ಟರು.ಕುಟುಂಬಶ್ರಿ ಸದಸ್ಯರು ಸಹಕರಿಸಿದರು.





