ಜೋಡುಕಲ್ಲು: ನಮ್ಮ ಜವನೆರ್ ಜೋಡುಕಲ್ಲು ಮತ್ತು ಶ್ರೀ ಕೂಳೂರು ಕನ್ಯಾನ ಸದಾಶಿವ ಕೆ.ಶೆಟ್ಟಿ ಅಭಿಮಾನಿ ಬಳಗ ಜೋಡುಕಲ್ಲು ಇವರ ಜಂಟಿ ಸಹಯೋಗದಲ್ಲಿ ಸಾದರಪಡಿಸುವ ಸಿನಿಮ್ಯಾಟಿಕ್ ಡ್ಯಾನ್ಸ್ ಸ್ಪರ್ಧೆ ಹಾಗೂ ಕಯ್ಯಾರ ಕೋಗಿಲೆ ಸಂಗೀತ ಸ್ಪರ್ಧೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಾದನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು 2024 ಎಪ್ರಿಲ್ 27 ಶನಿವಾರದಂದು ಜೋಡುಕಲ್ಲುವಿನಲ್ಲಿ ನಡೆಯಲಿದೆ.
ಇದರ ಅಂಗವಾಗಿ ಸಿನಿಮ್ಯಾಟಿಕ್ ಡ್ಯಾನ್ಸ್ ಸ್ಪರ್ಧೆ(ಸಾರ್ವಜನಿಕ) ಹಾಗೂ ಕಯ್ಯಾರ ಕೋಗಿಲೆ ಸಂಗೀತ ಸ್ಪರ್ಧೆ(15 ವರ್ಷದ ಕೆಳಗಿನ ಮಕ್ಕಳಿಗೆ ಕರೋಕೆ) ಆಯೋಜಿಸಿದ್ದು, ಡ್ಯಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಎ.15ರ ಮುಂಚಿತವಾಗಿ ಪ್ರವೇಶ ಶುಲ್ಕ 900 ರೂ. ಪಾವತಿಸಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಮೊದಲು ನೋಂದಾಯಿಸಿದ 10 ತಂಡಗಳಿಗೆ ಡ್ಯಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಮಾ.31ರ ಮುಂಚಿತವಾಗಿ ಪ್ರವೇಶ ಶುಲ್ಕ 500 ರೂ. ಪಾವತಿಸಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಸಂಗೀತ ಸ್ಪರ್ಧೆಯ ಪ್ರವೇಶಿಕ ಸ್ಪರ್ಧೆಯು ಎ.13ರಂದು ಬೆಳಗ್ಗೆ 9 ಗಂಟೆಗೆ ಫ್ರೆಂಡ್ಸ್ ಕ್ಲಬ್ ಜೋಡುಕಲ್ಲಿನ ಸಭಾಭವನದಲ್ಲಿ ನಡೆಯಲಿದೆ.
ತಮ್ಮ ಹೆಸರನ್ನು ನೋಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊ.ಸಂಖ್ಯೆ: 7558086372, 9074061729, 9947017711 ಸಂಪರ್ಕಿಸಬೇಕಾಗಿ ತಿಳಿಸಲಾಗಿದೆ.