ಕಾಸರಗೋಡು : ಕರ್ತವ್ಯ ನಿರತರಾಗಿದ್ದ ಪೋಲೀಸ್ ಸಿಬಂದಿಯೊಬ್ಬರು ಸೆ.26ರಂದು ಮುಂಜಾನೆ ವೇಳೆಗೆ ವಾಹನ ಅಪಘಾತದಲ್ಲಿ ಮೃತಪಟ್ಟ ಘಟನೆ ನಗರ ಸಮೀಪದ ಚೆಂಗಳ ನಾಲಾಂಮೈಲ್ ಎಂಬಲ್ಲಿ ನಡೆದಿದೆ.

ಮಾರುತಿ ಕಾರಿಗೆ ಟಿಪ್ಪರ್ ಲಾರಿ ಬಡಿದು ಸಂಭವಿಸಿದ ಅಪಘಾತದಲ್ಲಿ ಬೇಕಲ ಠಾಣೆಯ ವಿಶೇಷವಾಗಿ ದಳದ ಸಿಬಂದಿ, ಸಿವಿಲ್ ಪೋಲೀಸ್ ಆಫೀಸರ್ ಸಜೀಷ್ (36) ಮೃತಪಟ್ಟಿದ್ದಾರೆ. ಇವರ ಜತೆಗಿದ್ದ ಸಿವಿಲ್ ಪೋಲೀಸ್ ಆಫೀಸರ್ ಸುಭಾಶ್ಚಂದ್ರನ್ ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶುಕ್ರವಾರ ಮುಂಜಾನೆ 2.45ರ ವೇಳೆಗೆ ಅಪಘಾತ ಸಂಭವಿಸಿತು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಮಾದಕ ದ್ರವ್ಯ ಮಾರಾಟ ಸಂಬಂಧವಾದ ಸುಳಿವಿನ ಹಿನ್ನೆಲೆಯಲ್ಲಿ ಪೋಲೀಸ್ ವಾಹನತೊರೆದು, ಖಾಸಗಿ ಕಾರಿನಲ್ಲಿ ತನಿಖೆ ನಿಮಿತ್ತ ತೆರಳುವಾಗ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.




