10ನೇ ತರಗತಿ ವಿದ್ಯಾರ್ಥಿನಿಗೆ ಹಾಸ್ಟೆಲ್ ನಲ್ಲಿ ಹೆರಿಗೆ..! ಹಾಸ್ಟೆಲ್ ಸಿಬ್ಬಂದಿಗಳ ಅಮಾನತು..!!

Share with

ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ಇಟಗಿಯ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ 10ನೇ ತರಗತಿ ವಿದ್ಯಾರ್ಥಿನಿಗೆ ಹೆರಿಗೆಯಾದ್ದು, ಹೆರಿಗೆಗೆ ಕಾರಣವಾದ ಯುವಕನ ಮೇಲೆ ಕುಕನೂರು ಪೊಲೀಸ್ ಠಾಣೆಯಲ್ಲಿ ಪೋಕೋದಡಿ ಪ್ರಕರಣ ದಾಖಲಾಗಿದೆ.

ಪಾಲಕರು ತಮ್ಮ ಮಗಳ ಶಿಕ್ಷಣಕ್ಕಾಗಿ ಇಟಗಿಯ ಸರ್ಕಾರಿ ಹಾಸ್ಟೆಲ್‌ಗೆ ದಾಖಲಿಸಿದ್ದಾರೆ. ಆದರೆ ವಿದ್ಯಾರ್ಥಿನಿ ಗರ್ಭವತಿಯಾಗಿ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ. ಇದು ಪಾಲಕರನ್ನೂ ಆಶ್ಚರ್ಯ ತರಿಸಿದೆ.

ತನ್ನ ಹೆರಿಗೆ ತಾನೇ ಕಣ್ಣಾರೆ ಕಂಡು ಭಯಭೀತಳಾದ ವಿದ್ಯಾರ್ಥಿನಿ ಹಾಸ್ಟೆಲ್‌ನಲ್ಲಿ ಕಿರುಚಿಕೊಂಡಿದ್ದಾಳೆ. ಇದನ್ನು ಕಂಡ ವಿ ಸಹಪಾಠಿಗಳು ತಕ್ಷಣ ವಾರ್ಡನ್ ಹಾಗೂ ಆಸ್ಪತ್ರೆಗೆ ಮಾಹಿತಿ ನೀಡಿದ್ದಾರೆ.

ಬಾಲಕಿಯನ್ನು ಕುಕನೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಮಗು ಹಾಗೂ ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಯ ಹೆರಿಗೆಗೆ ಯಾರು ಕಾರಣ ಎನ್ನುವುದು ಆರಂಭದಲ್ಲಿ ತಿಳಿದಿರಲಿಲ್ಲ. ಹಾಸ್ಟೆಲ್‌ನ ಸಿಬ್ಬಂದಿಗಳ ಮೇಲೆ ಅನುಮಾನ ವ್ಯಕ್ತಪಡಿಸಲಾಗಿತ್ತು. ಆದರೆ ನಂತರದಲ್ಲಿ ಇದಕ್ಕೆ ಹನುಮಪ್ಪಗೌಡ ಎನ್ನುವ ಹೊರಗಿನ ಯುವಕ ಎನ್ನುವುದು ತಿಳಿದು ಬಂದಿದ್ದು, ಆತನ ಮೇಳೆ ಪೋಕೋದಡಿ ಕೇಸ್ ದಾಖಲಿಸಲಾಗಿದೆ.

ಈ ಘಟನೆ ತಿಳಿದ ಬೆನ್ನಲ್ಲೇ ಆಸ್ಪತ್ರೆಗೆ ಡಿಸಿ ಡಾ.ಸುರೇಶ ಇಟ್ನಾಳ ಸೇರಿ ಇತರೆ ಅಧಿಕಾರಿ ವರ್ಗ ಭೇಟಿ ನೀಡಿ ತನಿಖೆಗೆ ಸೂಚನೆ ನೀಡಿದ್ದಾರೆ.

ತಲೆ ತಗ್ಗಿಸುವಂತ ಘಟನೆ :

ಬಾಲಕಿ ಗರ್ಭವತಿಯಾಗಿದ್ದರೂ ವಸತಿ ನಿಲಯದ ವಾರ್ಡನ್ ಸೇರಿದಂತೆ ಸಿಬ್ಬಂದಿಗಳು ನಿರ್ಲಕ್ಷ್ಯತನ ಹಾಗೂ ಮೇಲಾಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದ ಹಿನ್ನೆಲೆ ಅವರ ಮೇಲೂ ಕ್ರಮ ಕೈಗೊಳ್ಳಲಾಗಿದೆ.

ಸದ್ಯ ಆಸ್ಪತ್ರೆಯಲ್ಲಿ ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ. ಈ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಪ್ರಕರಣದಡಿ ಒಟ್ಟು 6 ಜನರ ಮೇಲೆ ಕೇಸ್ ದಾಖಲಿಸಲಾಗಿದೆ. ಹಾಸ್ಟೆಲ್‌ನ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.


Share with

Leave a Reply

Your email address will not be published. Required fields are marked *