ಕಲ್ಲಡ್ಕ : ಕಲ್ಲಡ್ಕದ ವಿಟ್ಲಕ್ಕೆ ತೆರಳುವ ಬಸ್ ನಿಲ್ದಾಣದ ಬಳಿ ಇರುವ ಒಣಗಿದ ಮರ ಯಾವ ಕ್ಷಣದಲ್ಲಾದರೂ ಬೀಳುವಂತಿತ್ತು. ಕಲ್ಲಡ್ಕ ಜಂಕ್ಷನ್ ನಲ್ಲಿ ವಿಟ್ಲಕ್ಕೆ ತೆರಳುವ ರಸ್ತೆ ಆರಂಭದಲ್ಲಿ ಪ್ರಯಾಣಿಕರು ಬಸ್ ಗಳಿಗೆ ಕಾಯುತ್ತಾರೆ.
ಟಂಟಂ ವಾಹನ, ಆಟೊ ರಿಕ್ಷಾಗಳೂ ಇಲ್ಲೇ ನಿಲ್ಲುತ್ತವೆ. ರೆಂಬೆ, ಕೊಂಬೆಗಳನ್ನು ಕಳೆದುಕೊಂಡ ಮರವೊಂದು ಹಾಗೆಯೇ ಇತ್ತು. ಬಸ್ ಗಾಗಿ ಮರದ ಅಡಿಯಲ್ಲೇ ಕಾಯಬೇಕಾದ ಅನಿವಾರ್ಯತೆ ಇತ್ತು. ಇದೀಗ ಮಳೆ ಪ್ರಾರಂಭವಾಗಿದ್ದು, ಅಪಾಯದ ಮುನ್ಸೂಚನೆ ತಿಳಿದು ಆಡಳಿತ ಮರವನ್ನು ತೆರವುಗೊಳಿಸಿದೆ.