‘CM ಸಿದ್ದರಾಮಯ್ಯ ಕೊಡುಗೆಯೇ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗಿಂತ ಹೆಚ್ಚು’ ಎಂಬ ಪುತ್ರ ಯತೀಂದ್ರ ಹೇಳಿಕೆಯನ್ನು CM ಸಮರ್ಥಿಸಿಕೊಂಡಿದ್ದಾರೆ. ಹಾಸನದ ಅರಸೀಕೆರೆಯಲ್ಲಿ ಮಾತಾಡಿದ CM ಸಿದ್ದರಾಮಯ್ಯ, ‘ಮೊದಲು ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಇಷ್ಟಪಡೋದಿಲ್ಲ ಎಂದರು. ಬಳಿಕ ನಾವು BJP ಪಕ್ಷದವರಿಗಿಂತ ಹೆಚ್ಚು ಕೆಲಸ ಮಾಡಿದ್ದೇವೆ. BJP ಪಕ್ಷದವರು ಏನೂ ಮಾಡಿಲ್ಲ, ನಾವು ಮಾಡಿದ್ದೇವೆ’ ಎಂದು ಸಿದ್ದರಾಮಯ್ಯ ಅವರು ತಮ್ಮ ಮಗನ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.





