ಬೆಂಗಳೂರು: ಬೆಂಗಳೂರು ಕೃಷಿ ವಿವಿಯ ಜಿಕೆವಿಕೆ ಆವರಣದಲ್ಲಿ ಆಯೋಜಿಸಿರುವ ಕೃಷಿ ಮೇಳಕ್ಕೆ ನ.17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು. ಇದೇ ವೇಳೆ ನೂತನ ತಳಿಗಳು ಹಾಗೂ ತಾಂತ್ರಿಕತೆಗಳನ್ನು ಬಿಡುಗಡೆ ಮಾಡಿದರು.
ಸಿರಿಧಾನ್ಯ ಮಳಿಗೆಗಳು, ವಿವಿಧ ತಾಂತ್ರಿಕ ಮಳಿಗೆಗಳು ಹಾಗೂ ಸ್ಚಸಹಾಯ ಸಂಘದ ಉತ್ಪನ್ನಗಳು ಮೇಳದಲ್ಲಿವೆ. ಸಮಗ್ರ ಬೇಸಾಯ ಪದ್ಧತಿ, ತೋಟಗಾರಿಕೆ ಬೆಳೆಗಳು, ಕೊಯ್ಲೊತ್ತರ ತಾಂತ್ರಿಕತೆ, ಉತ್ಪನ್ನಗಳ ಮೌಲ್ಯವರ್ಧನೆ ಹೀಗೆ ನಾನಾ ಕೃಷಿ ತಾಂತ್ರಿಕತೆಗಳು ಮೇಳದ ಆಕರ್ಷಣೆಯಾಗಿವೆ.
ನ.17ರಿಂದ ಆರಂಭವಾಗಿರುವ ಮೇಳಕ್ಕೆ ನ.20 ಸಂಜೆ ತೆರೆ ಬೀಳಲಿದೆ.